ಕುಂದಾಪುರ :ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ 89.6 FM ಸಮುದಾಯ ಬಾನುಲಿ ಕೇಂದ್ರದ ಲಾಂಛನ ಮತ್ತು ರಾಗ ಬಿಡುಗಡೆ

0
400

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ನಿಮ್ಮ ಒಳಗೊಂದು ಕಿಚ್ಚು ಹುಟ್ಟಬೇಕು. ನಮ್ಮವರೇ ನಮ್ಮನ್ನು ಪ್ರೀತಿಯಿಂದ ಪ್ರೋತ್ಸಾಹ ನೀಡಿದಾಗ ನಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ. ಕುಂದಾಪುರ ಪರಿಸರ ಭಾಗದಲ್ಲಿ ಹಲವರು ಕಲೆಗಳಿವೆ ಅವುಗಳಿಗೆ ಇದರ ಉಪಯೋಗವಾಗಲಿ ಇವತ್ತಿನ ವರೆಗಿನ ಹಾದಿಯ ನನ್ನ ದುಡಿಮೆಯ 20ಶೇಕಡಾ ಮಾತ್ರ ನನಗಾಗಿ ಉಳಿದ 80ಶೇಕಡಾ ಸಮಾಜಕ್ಕಾಗಿ ಎಂಬ ಪಾಲಿಸಿ ಹಾಕಿಕೊಂಡು ಬರುತ್ತಿದ್ದೇನೆ. ರೇಡಿಯೋ ಎನ್ನುವುದು ಮೊಬೈಲ್ ಅಥವಾ ಉಳಿದ ಮಾಧ್ಯಮಗಳಿಗಿಂತ ಭಿನ್ನ. ಇದರ ಹಿಂದಿನ ಕೆಲಸಗಳು ಶ್ಲಾಘನೀಯ ಎಂದು ಹೇಳಿದರು.

ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ 89.6 FM ಸಮುದಾಯ ಬಾನುಲಿ ಕೇಂದ್ರ ಇದರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.

ಜಾದೂಗಾರ ಹಾಗೂ ಸಾಹಿತಿಗಳಾದ ಶ್ರೀ ಓಂ ಗಣೇಶ್ ಅವರು ರೇಡಿಯೋ ಕುಂದಾಪ್ರ 89.6 FM ಸಮುದಾಯ ಬಾನುಲಿ ಕೇಂದ್ರ ಇದರ ಬಿಡುಗಡೆಗೊಳಿಸಿ ರೇಡಿಯೋ ಒಂದು ಪ್ರಗತಿ ದತ್ತವಾದ ವಿಶಿಷ್ಟವಾದ ವರ ರೇಡಿಯೋ ಹೊರೆತು ಪ್ರಪಂಚ ಇಷ್ಟು ಮುಂದೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.

ಕ. ಸ. ಪ ಉಡುಪಿ ಜಿಲ್ಲೆ ಇದರ ಮಾಜಿ ಅಧ್ಯಕ್ಷರಾದ ಶ್ರೀ.ಎ.ಎಸ್.ಎನ್ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕುಂದಾಪುರ ಕನ್ನಡಕ್ಕೆ ಅದರದೇ ಅದ ವೈಶಿಷ್ಟ್ಯವಿದೆ ಎಂದು ಮಾತನಾಡಿದರು.

Click Here

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ .ಶಾಂತರಾಮ್ ಪ್ರಭು ರೇಡಿಯೋ ಕುಂದಾಪುರದ ಉಪಯೋಗವನ್ನು ವಿದ್ಯಾರ್ಥಿಗಳು ಸಂಘ ಸಂಸ್ಥೆ ಸಾರ್ವಜನಿಕರೆಲ್ಲರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕುಂದಾಪುರದ ಪ್ರತಿಭೆಗಳನ್ನು ಸಮಾಜಕ್ಕೆ ಗುರುತಿಸುವುದು ಹಾಗೂ ಕುಂದಾಪುರ ಕನ್ನಡ ಎಷ್ಟು ಪ್ರಸಿದ್ಧಿಯನ್ನು ಹೊಂದಿದೆ ಅಷ್ಟೇ ಪ್ರಸಿದ್ಧಿ ನಮ್ಮೂರಿನ ಜನತೆ ಹೊಂದಬೇಕು ಎಂದು ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಯು.ಎಸ್ ಶೆಣೈ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ರೇಡಿಯೋ ಕುಂದಾಪುರ. 89.6 FM ಇದರ ರಾಗ ಸಂಯೋಜನೆ ಮಾಡಿದ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಲಾಂಛನ ವಿನ್ಯಾಸ ಸ್ಪರ್ಧೆಯ ವಿಜೇತರಾದ ಕೇಶವ ಸಸಿಹಿತ್ಲು ಮತ್ತು ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಭಂಡರ್ಕಾರ್ಸ್ ಕಲಾ ಮತ್ತು ವಿಜ್ಞಾನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ದೇವದಾಸ್ ಕಾಮತ್, ಸದಾನಂದ ಛಾತ್ರ, ಜಯಕರ ಶೆಟ್ಟಿ ಪ್ರಜ್ಞೇಶ್ ಪ್ರಭು, ಆಡಳಿತ ಮಂಡಳಿಯ ಸದಸ್ಯರಾದ ಅಭಿನಂದನ್ ಶೆಟ್ಟಿ , ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರದ ಡಾ. ಜಿ.ಎಂ ಗೊಂಡ, ಗಣ್ಯರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರ ಆಚಾರಿ ಅತಿಥಿಗಳನ್ನು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಎಂ. ಗೊಂಡ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸುಮಲತಾ ನಾಯ್ಕ್ ಅತಿಥಿಗಳ ಪರಿಚಯಿದರು, ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here