ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಡಿ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಗಿ ಉತ್ತಮ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೆನ್ನಿ ಕ್ವಾಡ್ರಸ್ ಅವರಿಗೆ ಗ್ರಾಮ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಇತ್ತೀಚಿಗೆ ಕೋಡಿ ಗ್ರಾಮ ಪಂಚಾಯತ್ ನಲ್ಲಿ ಜರುಗಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆನ್ನಿ ಕ್ವಾಡ್ರಸ್ ಅವರು ಸರಕಾರಿ ಹುದ್ದೆಯಲ್ಲಿ 27 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ಕೋಡಿ ಗ್ರಾಮ ಪಂಚಾಯತ್‍ನಲ್ಲಿ ನೀಡಿದ ಸೇವೆ ಅತ್ಯಂತ ಅಮೂಲ್ಯ ಹಾಗೂ ಗ್ರಾಮಸ್ಥರ ಮನದಲ್ಲಿ ಅಚ್ಚಳಿಯದೇ ಉಳಿಯುವಂತದ್ದು. ಈ ಹಿಂದೆ ಕೋಡಿ ಪ್ರದೇಶದ ಜನರು ಸರಕಾರದ ಸವಲತ್ತುಗಳನ್ನು ಪಡೆಯಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಸಮಸ್ಯೆಗಳನ್ನೆಲ್ಲಾ ಅರಿತು, ತಮ್ಮ ಅಧಿಕಾರ ಅವಧಿಯಲ್ಲಿ ಜನರ ವಿದ್ಯುತ್ ಸಂಪರ್ಕ , ಡೋರ್ ನಂಬರ್ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಹಾಗೂ ಗ್ರಾಮದ ಅಭಿವೃದ್ದಿಗೂ ಸಾಕಷ್ಟು ಶ್ರಮಿಸಿದ್ದಾರೆ ಹಾಗೂ ಈ ದಿಟ್ಟ ಮಹಿಳೆ ಎಲ್ಲ ಸರಕಾರಿ ಅಧಿಕಾರಿಗಳಿಗೂ ಮಾದರಿಯಾಗಿದ್ದಾರೆ.
ಈ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ನೋಡೆಲ್ ಅಧಿಕಾರಿಯವರಾದ ಡಾ. ವಿಜಯ್ ಕುಮಾರ್, ಪಶು ವೈದ್ಯಾಧಿಕಾರಿಯವರು, ಪಶು ಸಂಗೋಪನಾ ಇಲಾಖೆ ಸಾಸ್ತಾನ , ವಿ.ಎ. ಗಿರೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಅಂತೋನಿ ಡಿಸೋಜಾ, ಕೃಷ್ಣ ಪೂಜಾರಿ ಪಿ, ಗೀತಾ ಖಾರ್ವಿ, ಕುಸುಮ, ಜಯಶ್ರೀ, ಕುಮಾರಿ ಸರಸ್ವತಿ , ಪ್ರಸಾದ್ , ವಿನಯ್, ಪಂಚಾಯತ್ ಕಾರ್ಯದರ್ಶಿ ಉಷಾ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ, ಗ್ರಂಥಪಾಲಕಿ , ಗ್ರಾಮ ಸಹಾಯಕಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು











