ಕುಂದಾಪುರ :ಶಿಕ್ಷಣದ ಜೊತೆಗೆ ಸಂಸ್ಕೃತಿಗಳ ಅರಿವು ಮೂಡಿದಾಗ ಸಮಾಜ ಸದೃಢ – ಮನು ಹಂದಾಡಿ

0
212

Click Here

Click Here

ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ದೀಪಾವಳಿ ಸಂಭ್ರಮ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶಾಲಾಶಿಕ್ಷಣದ ಜೊತೆಗೆ ಸಮಾಜದಲ್ಲಿರುವ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಅರಿವು ಮೂಡಿಸಿಕೊಂಡಾಗ ಮನುಷ್ಯ ಪತಿಪೂರ್ಣವಾಗುತ್ತಾನೆ. ಅಂತಹಾ ಕೆಲಸಗಳನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಕುಂದಾಪ್ರ ಕನ್ನಡ ಖ್ಯಾತಿಯ ಮನು ಹಂದಾಡಿ ಹೇಳಿದರು. ಕುಂದಾಪುರದ ಸುಣ್ಣಾರಿಯಲ್ಲಿರುವ ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ ನ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Click Here

ಪದವಿ ಪೂರ್ವ ಹಂತದ ವಯಸ್ಸು ಕನಸಿನ ಗೂಡು ಕಟ್ಟುವ ಸಮಯ. ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಉತ್ತಮ ಪರಿಸರ, ವ್ಯಕ್ತಿತ್ವಗಳ ಜೊತೆಗೆ ಸಮೃದ್ಧ ಬದುಕಿನ ಗೂಡು ಕಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ರಮೇಶ್ ಶೆಟ್ಟಿ ಮಾತನಾಡಿ, ಭಾರತದೆಲ್ಲೆಡೆ ದೀಪಾವಳಿ ಆಚರಿಸಿದರೆ ಕೇರಳದಲ್ಲಿ ಓಣಂ ಅನ್ನು ಆಚರಿಸುತ್ತಾರೆ. ಗ್ರಾಮೀಣ ಭಾಗಗಳ ಆಚರಣೆಗಳನ್ನು ನಮ್ಮ ಮಕ್ಕಳಿಗೆ ಕಲಿಸುವ ತಿಳಿಸುವ ಸಣ್ಣ ಪ್ರಯತ್ನಗಳನ್ನು ನಮ್ಮ ಕಾಲೇಜಿನಲ್ಲಿ ನಾವು ನಿರಂತರವಾಗಿ ನಡೆಸುತ್ತಾ ಬರುತ್ತಿದ್ದೇವೆ. ಶಿಕ್ಷಣದ ಜೊತೆಗೆ ಸಂಸ್ಕೃತಿಗಳ ತಿಳುವಳಿಕೆ ಬಹು ಮುಖ್ಯ ಎಂದು ನಾವು ಭಾವಿಸುತ್ತೇವೆ. ಆ ನಿಟ್ಟಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ’ ಎಂದರು.

ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ ಸಂಸ್ಥೆಯ ಕೋಶಾಧಿಕಾರಿ ಭರ‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ದೀಪಾವಳಿ ಸಂದರ್ಭ ವಿದ್ಯಾರ್ಥಿಗಳಿಗೆ ಹೊರಗೆ ಹೋಗಲು ಅವಕಾಶ ಇಲ್ಲದ ಕಾರಣ, ದೀಪಾವಳಿ ಹಬ್ಬದಿಂದ ವಂಚರಾಗಬಾರದು ಎನ್ನುವ ಕಾರಣಕ್ಕೆ ಗ್ರಾಮೀಣ ಭಾಗದ ಸಂಪ್ರದಾಯಗಳ ರೀತಿಯಲ್ಲಿ ದೀಪಾವಳಿಯನ್ನು ಆಚರಿಸುವ ಮೂಲಕ ಮಕ್ಕಳಲ್ಲಿ ಸಂಸ್ಕೃತಿಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಸಾಂಪ್ರದಾಯಿಕವಾಗಿ ಗೋಪೂಜೆ, ತುಳಸೀ ಪೂಜೆ, ಬಲೀಂದ್ರ ಪೂಂಜಾ ಕಾರ್ಯಕ್ರಮಗಳು ನಡೆದರು. ಬಳಿಕ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ಕಾರ್ಯದರ್ಶಿ ಪ್ರತಾಪಂದ್ರ ಶೆಟ್ಟಿ ಉಪ್ಪಿ ತರಿದರು. ಸಂಸ್ಕೃತ ಉಪನ್ಯಾಸಕಿ ಸುದಕ್ಷಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here