ಕುಂದಾಪುರ ಮಿರರ್ ಸುದ್ದಿ
ಕೋಟ :ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಶುಕ್ರವಾರ ಅಧ್ಯಕ್ಷ ಶ್ಯಾಮಸುಂದರ ನಾಯರಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ರಾಷ್ಟ್ರೀಯ ಹೆದ್ದಾರಿ 66ರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ನವಯುಗ ಕಂಪೆನಿ ಅರ್ಧದಲ್ಲಿಯೇ ನಿಲ್ಲಿಸಿದ್ದು ಅದರ ಕಾಮಗಾರಿಯನ್ನು ಕೂಡಲೇ ಮುಗಿಸಬೇಕು, ಈಗಾಗಲೇ ಲೋಕಸಭಾ ಸದಸ್ಯರು ಕೋಟ ಮೂರು ಕೈಯಲ್ಲಿ ತುರ್ತಾಗಿ ಸಾರ್ವಜನಿಕರು ನಡೆದಾಡಲು ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ಸೂಚಿಸಿದ್ದು ಅದರ ಕಾಮಗಾರಿಯನ್ನು ಕೂಡಲೇ ಕೈಗೆತ್ತಿ ಕೊಳ್ಳಬೇಕು, ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಹೊಂಡ ಬಿದ್ದಿದ್ದು ಇದರಿಂದ ಪಾದಾಚಾರಿಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಕೂಡಲೇ ಮಣ್ಣು ಹಾಕಿ ಸರಿಪಡಿಸಿಕೊಡಬೇಡುವಂತೆ ಮತ್ತು ಕುಂದಾಪುರ ಪಿ.ಡ್ಬ್ಲಯು ಕಚೇರಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರ ಮುಖ್ಯ ರಸ್ತೆಯ ಸಂಪರ್ಕವನ್ನು ಸರ್ವಿಸ್ ರಸ್ತೆಗೆ ಕಲ್ಪಿಸಿ ಕುಂದಾಪುರ ನಗರಕ್ಕೆ ಹೋಗಲು ಸುಲಭ ಸಂಚಾರವನ್ನು ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನವಯುಗ ಕಂಪೆನಿ ಮತ್ತು ಜಿಲ್ಲಾಧಿಕಾರಿಗಳಲ್ಲಿ ಈ ಮೂಲಕ ಆಗ್ರಹಿಸಲು ನಿರ್ಣಯವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಪ್ರತಾಪ್ ಶೆಟ್ಟಿ, ವಿಠಲ್ ಪೂಜಾರಿ, ಅಲ್ವಿನ್ ಅಂದ್ರಾದೆ, ರಾಘವೇಂದ್ರ ಐರೋಡಿ ಮತ್ತು ಸ್ಥಳೀಯರು ಇದ್ದರು.











