ಕುಂದಾಪುರ ಮಿರರ್ ಸುದ್ದಿ…
ಕೋಟ: ವಿವೇಕ ಪದವಿಪೂರ್ವ ಕಾಲೇಜು, ಕೋಟ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯವರು ನಡೆಸಿದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಎರಡು ಪ್ರಥಮ ಹಾಗೂ ಒಂದು ದ್ವಿತೀಯ ಸ್ಥಾನ ಗಳಿಸಿ ವಿಖ್ಯಾತ ಹೇರ್ಳೆ ಯವರು ನ.15ರಂದು ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ಕೋಟ ವಿವೇಕ ಪದವಿಪೂರ್ವ ಕಾಲೇಜು ಕೋಟ ಇಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ದಿವಂಗತ ಗೋಪಾಲ ಅಡಿಗ ಪಾರಂಪಳ್ಳಿ ಅವರ ಶಿಷ್ಯ ಹಾಗೂ ವಿಶ್ವನಾಥ ಹೇರ್ಳೆ ಗಿಳಿಯಾರು ಮತ್ತು ನಾಗರತ್ನ ಜಿ ದಂಪತಿಯ ಪುತ್ರರಾಗಿರುತ್ತಾರೆ.











