ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಯೋಜನೆಯಡಿ ಸೈಕಲ್ ಜಾಥಾವನ್ನು ರಾಜ್ಯದ ಪ್ರತಿಷ್ಟಿತ ಯುವ ಮೆರಿಡಿಯನ್ ಹೋಟೆಲ್ ಇವರ ಪ್ರಾಯೋಜಕತ್ವದಲ್ಲಿ ಕುಂದಾಪುರದಲ್ಲಿ ಭಾನುವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಸೈಕ್ಲೋತಾನ್-ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ ಅವರು ಪ್ರಧಾನಿ ಮೋದಿಯವರ ಪರಿಕಲ್ಪನೆಯಂತೆ ಆರೋಗ್ಯವಂತ ಸಮಾಜದ ನಿರ್ಮಾಣ ಗುರಿಯಾಗಿತ್ತು ಅದರಂತೆ ಇಲ್ಲಿನ ಆಯೋಜಕರು. ಕಾರ್ಯಕ್ರಮವನ್ನು ಆಯೋಜನೆ ಮಾಡಿದ ರೀತಿಗೆ ಅಭಿನಂದನೆ ಸಲ್ಲಿಸಿದರು.



ಶಾಸ್ತ್ರಿ ಸರ್ಕಲ್‍ನಿಂದ ಹೊರಟ ಸೈಕಲ್ ಜಾಥಾ ಕುಂದಾಪುರ ಪೇಟೆ ಸಂಚರಿಸಿ ಕೋಟೇಶ್ವರದ ಯುವ ಮೆರಿಡಿಯನ್‍ಗೆ ತೆರಳಿ. ಪುನಃ ಅಲ್ಲಿಂದ ಕುಂದಾಪುರಕ್ಕೆ ಬಂದು ಶಾಸ್ತ್ರಿ ಸರ್ಕಲ್‍ನಲ್ಲಿ ಈ ಸೈಕಲ್ ಜಾಥಾವು ಸಂಪನ್ನಗೊಂಡಿತು.
ಲಕ್ಕಿ ಕೂಪನ್‍ನಲ್ಲಿ ವಿಜೇತ ಯುವ ಮೆರಿಡಿಯನ್ ಪ್ರಾಂಗಣದಲ್ಲಿ ಬಹುಮಾನವಾಗಿ ಶ್ರವಣ್ ಕುಮಾರ್ ಸೈಕಲ್ ನೀಡಿ ಗೌರವಿಸಲಾಯಿತು. ಯುವ ಮೆರಿಡಿಯನ್‍ನ ಮುಖ್ಯಸ್ಥ ಉದಯ ಕುಮಾರ್ ಶೆಟ್ಟಿ ಹಾಗೂ ವಿನಯ ಕುಮಾರ್ ಶೆಟ್ಟಿ , ಕುಂದಾಪುರ ಸೈಕ್ಲಿಂಗ್ ಕ್ಲಬ್‍ನ ಮುಂದಾಳು ಪ್ರವೀಣ್ ಕುಮಾರ್, ಕುಂದಾಪುರ ಠಾಣಾಧಿಕಾರಿ ಸದಾಶಿವ ಗವರೋಜಿ, ಉದ್ಯಮಿಗಳಾದ ವಿಜಯ್ ಹೆಗ್ಡೆ, ಕಿಶೋರ್ ಕುಮಾರ್, ಕುಂದಾಪುರ ಠಾಣೆಯ ಜಯಶ್ರೀ, ಸುಧಾಕರ್ ಮೊದಲಾದವರು ಉಪಸ್ಥಿತರಿದ್ದರು.











