ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವಂಡ್ಸೆ ಸಮೀಪದ ಅಬ್ಬಿ ಚಿತ್ತೇರಿಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಎ.ಜಿ ಮಂಜುನಾಥ ಗುರುಸ್ವಾಮಿ ಇವರ 18ನೇ ವರ್ಷದ ಹಾಗೂ ಅಯ್ಯಪ್ಪ ಭಕ್ತವೃಂದದವರ ಶಬರಿಮಲೈ ಯಾತ್ರೆಯ ಪ್ರಯುಕ್ತ ಗುರುವಂದನೆ ಕಾರ್ಯಕ್ರಮ ಜರಗಿತು.
ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ, ಸುದೀರ್ಘ ಅವಧಿಯಿಂದ ಶಬರಿಮಲೈ ಯಾತ್ರೆ ಮಾಡುತ್ತಿರುವ ವಂಡಬಳ್ಳಿ ಜಯರಾಮ ಶೆಟ್ಟಿ, ಗುರುಸ್ವಾಮಿಗಳಾದ ಸೂರ್ಯನಾರಾಯಣ ಪೂಜಾರಿ, ಪ್ರಭಾಕರ ಗಾಣಿಗ, ಸದಾನಂದ ನಾಯ್ಕ್ ಅವರಿಗೆ ಎ.ಜಿ ಮಂಜುನಾಥ ಅವರು ಗುರುವಂದನೆ ಸಲ್ಲಿಸಿದರು.
ಅಯ್ಯಪ್ಪ ವ್ರತಧಾರಿಗಳು ಉಪಸ್ಥಿತರಿದ್ದರು. ವಾಸು ಜಿ. ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಮಹಾಪೂಜೆ, ಅನ್ನಸಂತರ್ಪಣೆ, ಸ್ಥಳೀಯ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಸಂಜೆ ಇರುಮುಡಿ ಕಾರ್ಯಕ್ರಮ ಜರುಗಿತು.











