ಕುಂದಾಪುರ :’ಕಾಂತಾರ’ ಸಿನೆಮಾದ ಪ್ರಿಕ್ವೇಲ್ ಪಾರ್ಟ್‍ನ ಫಸ್ಟ್ ಲುಕ್ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ

0
351

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :‘ಕಾಂತಾರ’ ಸಿನೆಮಾದ ಪ್ರಿಕ್ವೇಲ್ ಪಾರ್ಟ್‍ನ ಫಸ್ಟ್ ಲುಕ್ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನವೆಂಬರ್ 27ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಟ ನಿರ್ದೇಶಕ ರಿಷಬ್‍ಶೆಟ್ಟಿ, ಕಾಂತಾರ ಸಿನೆಮಾದ ಸಂಪೂರ್ಣ ಯಶಸ್ಸನ್ನು ಕನ್ನಡ ಸಿನಿಮಾ ವೀಕ್ಷಕರಿಗೆ ಅರ್ಪಿಸುತ್ತೇನೆ. ಸಿನೆಮಾ ಶೂಟಿಂಗ್‍ನನ್ನು ಸದ್ಯದಲ್ಲೆ ಆರಂಭಿಸುತ್ತಿದ್ದೇವೆ. ಸಿನೆಮಾದಲ್ಲಿ ಹೊಸ ಪ್ರತಿಭೆಗಳನ್ನು ಸೇರಿಸಿಕೊಳ್ಳುತ್ತಿದ್ದೇವೆ. ತಾಂತ್ರಿಕ ತಂಡವನ್ನು ಹೊರತುಪಡಿಸಿ, ಕೆಲವು ಹೊಸಬರನ್ನೂ ಸೇರಿಸಿಕೊಳ್ಳುತ್ತಿದ್ದೇವೆ. ಆನೆಗುಡ್ಡೆ ಕ್ಷೇತ್ರ ನಾವು ನಂಬಿದ ಕ್ಷೇತ್ರ, ವಿಜಯ್ ಕಿರಗಂದೂರು ಅವರು ಕೂಡ ಕ್ಷೇತ್ರದ ದೇವರ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ವಿನಾಯಕನ ಆಶಿರ್ವಾದ ಸಿನೆಮಾ ತಂಡದ ಮೇಲೆ ಇರುತ್ತದೆ ಎಂಬ ನಂಬಿಕೆ ಇದೆ ಎಂದರು.

Click Here

ಆನೆಗುಡ್ಡೆ ನಾವು ನಂಬಿದ ಕ್ಷೇತ್ರ ಹಾಗಾಗಿ ಇಲ್ಲಿಯೇ ಪ್ರಿಕ್ವೇಲ್ ಪಾರ್ಟ್‍ನ ಫಸ್ಟ್ ಲುಕ್ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೆವೆ. ಒಂದು ವರ್ಷದಲ್ಲಿ ಸಿನಿಮಾ ತೆರೆಗೆ ತರುವ ಗುರಿ ಹೊಂದಿದ್ದೇವೆ ಎಂದರು.

14ನೇ ಶತಮಾನದ ಕಥೆಯನ್ನು ತೆರೆ ಮೇಲೆ ತರುವುದಕ್ಕೆ ಸಿನೆಮಾ ತಂಡ ತಯಾರಾಗಿದೆ ಅಂತೆ. ಪಂಜುರ್ಲಿ ದೈವದ ಹುಟ್ಟಿನ ಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದು, ಸಿನೆಮಾಕ್ಕಾಗಿ ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್ 110 ಕೋಟಿ ಹೂಡಿಕೆ ಮಾಡುತ್ತಿದೆ ಎನ್ನಲಾಗಿದೆ.
ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಳಿಸಿದ ‘ಕಾಂತಾರ ಚಾಪ್ಟರ್1’ನ ಫಸ್ಟ್‍ಲುಕ್ ಟೀಸರ್‍ನಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿಯ ಪೋಟೋ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಈ ಚಿತ್ರದ ಕಥೆ ಇನ್ನಷ್ಟು ವಿಶಿಷ್ಟವಾಗಿದ್ದು ಸಿನಿಮಾ ಪ್ರೇಕ್ಷಕರ ಗಮನ ಸಳೆದಿದೆ.
ಈ ಸಂದರ್ಭ ಸಿನಿಮಾ ತಂಡ, ಹೊಂಬಾಳೆ ಫಿಲ್ಮ್ಸ್ ಬಳಗ, ರಿಷಬ್ ಶೆಟ್ಟಿ ಆಪ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here