ಉಗಾಂಡದ ಗೆಟ್ಟೋ ಕಿಡ್ಸ್ ಮತ್ತು ಕನ್ನಡ ಟಪಾಂಗ್ ಸಂಗೀತದ ಅದ್ಭುತ ಸಂಗಮ!

0
222

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಉಗಾಂಡದ ಗೆಟ್ಟೋ ಕಿಡ್ಸ್‌ನ ಹೈ-ಎನರ್ಜಿ ಸ್ಟೆಪ್‌ಗಳು ಮತ್ತು ಕನ್ನಡ ಟಪಾಂಗ್ ಸಂಗೀತದ ಅನನ್ಯ ಮಿಶ್ರಣವು ಇಂಟರ್ನೆಟ್‌ನಲ್ಲಿ ಕಾಡ್ಗಿಚ್ಚು ಹಚ್ಚಿದೆ. ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಆಫ್ರಿಕಾದಲ್ಲೂ ‘AFRO ಟಪಾಂಗ್‌’ ಹಾಡಿಗೆ ಹೆಜ್ಜೆ ಹಾಕಿದ ಉಗಾಂಡದ ಜಿಟೊ ಕಿಡ್ಸ್ . ಈ ಸಂಯೋಜನೆಯ ವೀಡಿಯೊ ಸಂಚಲನ ಮೂಡಿಸಿದ್ದು ಆಫ್ರೋ ಶೈಲಿಯ ಸ್ಟೆಪ್‌ಗಳು ಮತ್ತು ಕನ್ನಡ ಸೊಗಡು ಸೇರಿ ಹೊಸ ಅಲೆಯನ್ನು ಸೃಷ್ಟಿಸುತ್ತಿವೆ.

Click Here

ಬ್ರಿಟನ್‌ನ ಗೋಲ್ಡನ್ ಬಜರ್ (Britain’s Got Talent) ಸೇರಿದಂತೆ ಹಲವು ಗ್ಲೋಬಲ್ ಶೋಗಳಲ್ಲಿ ಮಿಂಚಿದ ಈ ಕಲಾವಿದರು ಈಗ AFRO ಟಪಾಂಗ್ ಹಾಡಿನೊಂದಿಗೆ ಆಫ್ರಿಕಾದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ನವೆಂಬರ್ 1ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ AFRO ಟಪಾಂಗ್ ಹಾಡು ಬರೋಬ್ಬರಿ 16.06 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿ,158K ಲೈಕ್ಸ್ ಪಡೆದು ಅಗಾಧ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡಿನಲ್ಲಿ ಕನ್ನಡ ಸೂಪರ್‌ಸ್ಟಾರ್‌ಗಳಾದ ಶಿವರಾಜ್‌ಕುಮಾರ್, ಉಪೇಂದ್ರ, ಮತ್ತು ರಾಜ್ ಬಿ ಶೆಟ್ಟಿ ಅವರ ಪವರ್‌ಪ್ಯಾಕ್ ಪರ್ಫಾರ್ಮೆನ್ಸ್ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಮ್ಯಾಜಿಕ್ ಕಾಣಬಹುದು.
ಹಾಡಿನ ಲಯಬದ್ಧತೆ, ಫ್ಲ್ಯಾಶ್‌ಮಾಬ್‌ಗಳು, ಸಂಕ್ಷಿಪ್ತ ಕ್ಲಿಪ್‌ಗಳು, ಮತ್ತು ಸೋಶಿಯಲ್ ಮೀಡಿಯಾ ಚಾಲೆಂಜ್‌ಗಳು ಇದರ ಜನಪ್ರಿಯತೆಯನ್ನು ಹೆಚ್ಚಿಸಿವೆ. ಇದರ ಜೊತೆಗೆ, ಹಾಲಿವುಡ್‌ನ ಪ್ರಸಿದ್ಧ VFX ಕಂಪನಿ MARZ (ಕೆನಡಾ) ಈ ಹಾಡಿನ ವಿಷುವಲ್‌ಗಳನ್ನು ಇನ್ನೂ ಹೆಚ್ಚು ಆಕರ್ಷಕವಾಗಿಸಿದೆ.

ಈ ಹಾಡು ಕೇವಲ ಪ್ರಚಾರಕ್ಕಾಗಿ ಬಿಡುಗಡೆ ಮಾಡಿದರೂ, ಇದರ ಭರ್ಜರಿ ಪ್ರತಿಕ್ರಿಯೆ ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ’45’ ಚಿತ್ರದ ಬಾಕ್ಸ್ ಆಫೀಸ್ ಯಶಸ್ಸಿಗೆ ಮುನ್ನೋಟವಾಗಿದೆ. ‘AFRO ಟಪಾಂಗ್‌’ ಹಾಡು ಸಾಮಾಜಿಕ ಮಾಧ್ಯಮದಲ್ಲಿ ಗಳಿಸಿರುವ ಈ ಭರ್ಜರಿ ಯಶಸ್ಸು, ನಿರ್ಮಾಪಕ ರಮೇಶ್‌ ರೆಡ್ಡಿ ಅವರ ಈ ಅತಿ ದೊಡ್ಡ
ಸಾಹಸಕ್ಕೆ ಭದ್ರ ಬುನಾದಿ ಹಾಕಿದೆ. ಹಾಡಿನ ಯಶಸ್ಸಿನ ಈ ಅಲೆಯಲ್ಲಿ, ಡಿಸೆಂಬರ್ 25ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ’45’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಓಪನಿಂಗ್‌ ಪಡೆಯುವ ನಿರೀಕ್ಷೆ ಮೂಡಿಸಿದೆ.

Click Here

LEAVE A REPLY

Please enter your comment!
Please enter your name here