ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ಸಂಚಾರ ಠಾಣಾ ವ್ಯಾಪ್ತಿಯ ಹೆಮ್ಮಾಡಿ ಹಾಲು ಡೈರಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಕಾರು ನಡುವೆ ಅಫಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಕ್ಲಾಡಿ ಸಮೀಪದ ತೊಪ್ಲು ನಿವಾಸಿ ಮಹಾಬಲ ಪೂಜಾರಿ (48) ಮೃತ ಸವಾರ. ಸ್ಥಳಕ್ಕೆ ಸಂಚಾರೀ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತರು ಖಾಸಗಿ ಬಸ್ಸು ಚಾಲಕರಾಗಿದ್ದು, ಕೊನೆಯ ಟ್ರಿಪ್ ಮುಗಿಸಿ ತಮ್ಮ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.











