ಕುಂದಾಪುರ :ಕುಡಿಯುವ ನೀರಿಗೆ ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಅತೀ ಅಪಾಯಕಾರಿ – ಉದ್ಯಮಿ ಡಾ.ಜಿ.ರಾಮಕೃಷ್ಣ ಆಚಾರ್

0
581

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ದೇಶದಲ್ಲಿ ಪ್ಲಾಸ್ಟಿಕ್ ಹಾಗೂ ರಾಸಾಯನಿಕಗಳಿಂದಾಗಿ ಕುಡಿಯುವ ನೀರು ಹಾಗೂ ನದಿಗಳು ಸಂಪೂರ್ಣ ಕಲುಶಿತಗೊಂಡಿವೆ. ಆದಕ್ಕಾಗಿ ನೀರಿನ ಬಾಟಲಿಗಳಂತಹಾ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೃಷ್ಟಿಸುವ ಯಾವುದೇ ವಸ್ತುಗಳನ್ನು ದೇಶದಲ್ಲಿ ನಿರ್ಭಂಧಿಸಬೇಕು ಮತ್ತು ಶುದ್ಧ ಕುಡಿಯುವ ನೀರಿನ ಮರು ಹೂರಣ ಮಾಡಬೇಕು ಎಂದು ಹೇಳಿದರು. ಅವರು ಯಡಾಡಿ – ಮತ್ಯಾಡಿ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಗೆ ರೂ.1.75ಲಕ್ಷ ಮೌಲ್ಯದ ವಾಟರ್ ಪ್ಯೂರಿಪಯರ್ ಕೊಡುಗೆ ನೀಡಿ ಮಾತನಾಡಿದರು.

Click Here

ಕುಡಿಯುವ ನೀರಿನ ಬಗ್ಗೆ ನಾವು ಸಮಗ್ರವಾಗಿ ಅಧ್ಯಯನ ನಡೆಸಿದ್ದೇವೆ. ದೇಶದಾದ್ಯಂತ ಸುಮಾರು 1 ಮಿಲಿಯದಷ್ಟು ನಾವು ತಯಾರಿಸಿರುವ ಘಟಕಗಳನ್ನು ಸ್ಥಾಪಿಸಿದರೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದು ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ನಿರ್ಬಂಧಿಸಬಹುದು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ದಾನಿಗಳಾದ ಉದ್ಯಮಿ ಡಾ.ಜಿ.ರಾಮಕೃಷ್ಣ ಆಚಾರ್ ಇವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಸುಜ್ಜಾನ್ ಎಜುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ಭರತ್ ಶೆಟ್ಟಿ, ಶ್ರೀ ರಾಮಕೃಷ್ಣ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಹೆಗ್ಡೆ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ, ದೈಹಿಕ ಶಿಕ್ಷಕ ಉಮೇಶ್ ಶೆಟ್ಟಿ, ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಪ್ರದೀಪ್ ಉಪಸ್ಥಿತರಿದ್ದರು. ಸುಜ್ಜಾನ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Click Here

LEAVE A REPLY

Please enter your comment!
Please enter your name here