ಕುಂದಾಪುರ ಮಿರರ್ ಸುದ್ದಿ…



ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಸರಕಾರದ ಅನುದಾನ ದೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಆರಂಭಗೊಂಡಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯೋಪಾಧ್ಯಾಯ ಅರುಣ್ ಕುಮಾರ್ ವಹಿಸಿದ್ದರು.
ಕರಾಟೆ ತರಬೇತಿ ಉದ್ಘಾಟನೆಯನ್ನು ಕರಾಟೆಯಲ್ಲಿ ಬ್ಲೇಕ್ ಬೆಲ್ಟ್ ಪಡೆದು ಜಿಲ್ಲಾಮಟ್ಟ ಪ್ರತಿನಿಧಿಸಿದ 10ನೆಯ ತರಗತಿ ವಿದ್ಯಾರ್ಥಿನಿ ದೀಕ್ಷಾ ದೀಪ ಬೆಳಗಿಸಿ ನೆರವೇರಿಸಿದರು. ಕರಾಟೆ ಗುರು ಕೇಶವ ಜೋಗಿ, ಸಲ್ವಾಡಿ ಮಾತನಾಡಿ ತರಬೇತಿಯ ನಂತರ ಸತತ ಅಭ್ಯಾಸ ಅಗತ್ಯ ಎಂದರು. ಶಿಕ್ಷಕ ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











