ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಮಣೂರು ಶ್ರೀ ಮಹಾಲಿಂಗೇಶ್ವರ ಮತ್ತು ಹೇರಂಬ ಮಹಾಗಣಪತಿ ದೇಗುಲದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಡಿ.12ರಂದು ನಡೆಯಿತು. ಈ ಪ್ರಯುಕ್ತ ರಂಗಪೂಜೆ, ಅಗಲುಸೇವೆ, ಪನ್ಯಾರ ಸೇವೆ , ಶ್ರೀರಾಮ ಭಜನಾ ತಂಡ ಮಣೂರು ಇವರಿಂದ ಭಜನಾ ಕಾರ್ಯಕ್ರಮ ಹಾಗೂ ಮುಕಾಂಬಿಕಾ ತೀರ್ಥಕೆರೆಯಲ್ಲಿ ತೆಪೋತ್ಸವ ಜರಗಿತು.
ದೇಗುಲದ ಸುತ್ತ ಹಣತೆಗಳ ಸಾಲು ವಿಶೇಷವಾಗಿ ಗಮನ ಸೆಳೆಯಿತು. ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ರಾಮಪ್ರಸಾದ ಅಡಿಗ ನೆರವೆರಿಸಿದರು.
ಶ್ರೀ ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ,ಟ್ರಸ್ಟ್‌ನ ಸದಸ್ಯರಾದ ಅಶೋಕ ಶೆಟ್ಟಿ, ದಿನೇಶ್ ಆಚಾರ್, ಕೃಷ್ಣ ದೇವಾಡಿಗ, ಬಾಬು ಕೋಟತಟ್ಟು, ಸುಫಲ ಶೆಟ್ಟಿ, ದಿವ್ಯ ಪ್ರಭು, ಅರ್ಚಕ ಪ್ರತಿನಿಧಿ ರವಿ ಐತಾಳ್ ಮತ್ತಿತರರು ಇದ್ದರು.











