ಕುಂದಾಪುರ ಮಿರರ್ ಸುದ್ದಿ…

ಬ್ರಹ್ಮಾವರ: ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು- ಬಾರಕೂರು ಇಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಡಿಸೆಂಬರ್ 16ರಿಂದ ಡಿಸೆಂಬರ್ 20ರ ತನಕ ನಡೆಯಿತು.
ಡಿಸೆಂಬರ್ 16 ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಪುಣ್ಯಾಹ ದೇವನಾಂದಿ, ಅಗ್ನಿಜನನ, 108 ಕಾಯಿ ಗಣಹೋಮ, ನವಕ ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ ಗಂಟೆ 12ಕ್ಕೆ ಪೂರ್ಣಾಹುತಿ, ರಾತ್ರಿ ಗಂಟೆ 7ಕ್ಕೆ ಗುರುಮಠದ ಮೂಲ ಮನೆಯಲ್ಲಿ ತುಳಸಿ ಪೂಜೆ, ರಾತ್ರಿ 10ಕ್ಕೆ ಕೆಂಡಸೇವೆ, 11.30ಕ್ಕೆ ರಂಗಪೂಜೆ, ತುಳಸಿ ಪೂಜೆ ನಡೆಯಿತು,
ಡಿ.16ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯ ತನಕ ಶ್ರೀ ಕುಲಮಹಾಸ್ತ್ರೀ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ 2 ಗಂಟೆಯಿಂದ ಬೆಳಿಗ್ಗೆ 4 ಗಂಟೆಯ ತನಕ ಸ್ಥಳೀಯ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಪ್ರಾತಃಕಾಲ 4 ಗಂಟೆಯಿಂದ 6 ಗಂಟೆಯ ತನಕ ಶ್ರೀ ವಿನಾಯಕ ಭಜನಾ ಮಂಡಳಿ ನಾಗರಮಠ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಡಿಸೆಂಬರ್ 17 ಆದಿತ್ಯವಾರ ಪೂರ್ವಾಹ್ನ 9ಕ್ಕೆ ಮಹಾಮಂಗಳಾರತಿ, 10ಗಂಟೆಗೆ ಪರಿವಾರ ದೇವರುಗಳ ನೃತ್ಯ ಸೇವೆ, 12ಗಂಟೆಗೆ ತುಲಾಭಾರಾದಿ ಹರಕೆಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಅಪರಾಹ್ನ 3 ಗಂಟೆಗೆ ಮಹಾಮಂಗಳಾರತಿ, ಮಹಾಬಲಿ ಪೂಜೆ, ಸಂಜೆ ಗಂಟೆ 5ಕ್ಕೆ ಸೆಡಿ ಪೂಜೆ, ಬೆಳಗಿನ ಜಾವ 5 ಗಂಟೆಗೆ ತೆಪ್ಪೋತ್ಸವ, ಕಟ್ಟೆಪೂಜೆ ನಡೆಯಿತು.
ಡಿಸೆಂಬರ್ 17ರಂದು ಸಂಜೆ 6ಕ್ಕೆ ಮೊಗವೀರ ಯುವಕ ಸಂಘ ಬೆಣ್ಣೆಕುದ್ರು ಬಾರ್ಕೂರು ಇವರಿಂದ ಸಾಂಸ್ಕೃತಿಕ ವೈವಿಧ್ಯ. ಡಿ.18 ಸಂಜೆ 6ಕ್ಕೆ ಮೊಗವೀರ ಮಹಿಳಾ ಸಂಘ ಬೆಣ್ಣೆಕುದ್ರು ಬಾರ್ಕೂರು ಇವರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
ಡಿ.18ರಂದು ಸೋಮವಾರ ಪೂರ್ವಾಹ್ನ 9 ಗಂಟೆಗೆ ಮಹಾಮಂಗಳಾರತಿ, 10 ಗಂಟೆಗೆ ಪರಿವಾರ ದೇವರುಗಳ ನೃತ್ಯಸೇವೆ, ಗುರು ಪೀಠದಲ್ಲಿ ದೀಪಾರಾಧನೆ, 12ಗಂಟೆಗೆ ತುಲಾಭಾರಾದಿ ಹರಕೆಗಳು, ಅಪರಾಹ್ನ ಗಂಟೆ 3ಕ್ಕೆ ಮುಳ್ಳುಹಾವಿಗೆ ಪಾದುಕೆ ಪೂಜೆ, ಬೆನಗಲ್ಲು ಪೂಜೆ, ಯೋಗಿ ಪುರುಷರ ದರ್ಶನ, ಬೊಬ್ಬರ್ಯ ದೇವರ ದರ್ಶನ, ಅಜ್ಜಮ್ಮ ದೇವರಿಗೆ ಹೂವು ಅರ್ಪಣೆ ನಡೆಯಲಿದೆ.
ಡಿಸೆಂಬರ್ 19 ಮಂಗಳವಾರ ಪೂರ್ವಾಹ್ನ 11ಗಂಟೆಗೆ ನಾಗದೇವರ ದರ್ಶನ, 12 ಗಂಟೆಗೆ ಮಹಾಪೂಜೆ, ಹಸಲ ದೈವ ಮತ್ತು ಕೋಳಿಯಾರ ದೈವದ ಪೂಜೆ, ರಾತ್ರಿ 9 ಗಂಟೆಗೆ ಶ್ರೀ ಮಲೆಸಾವಿರ ಮತ್ತು ಪರಿವಾರ ದೈವಗಳ ಕೋಲ ಪ್ರಾರಂಭವಾಗಲಿದೆ.
ಡಿಸೆಂಬರ್ 20 ಬುಧವಾರ ಪ್ರಾತಃಕಾಲ 6 ಗಂಟೆಗೆ ಮಲೆಸಾವಿರ ದೈವದರ್ಶನ, ಗಂಟೆ 8ಕ್ಕೆ ಹಾಲಾವಳಿ ನಡೆಯಲಿದೆ.
ಡಾ.ಜಿ.ಶಂಕರ್, ಉದ್ಯಮಿ ಆನಂದ ಸಿ.ಕುಂದರ್ , ಉಡುಪಿ ಶಾಸಕ ಯಶಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.











