ಕೋಟ – ಅಮೃತೇಶ್ವರಿ ದೇವಳದಲ್ಲಿ ಶರನ್ನವರಾತ್ರಿ ಕಾರ್ಯಕ್ರಮ ಸಂಪನ್ನ

0
375

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಪುರಾಣಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಸಂತಾನ ಭಾಗ್ಯ ಕರುಣಿಸುವ ಹಲವು ಮಕ್ಕಳ ತಾಯಿ ಕೋಟ ಅಮೃತೇಶ್ವರಿ ದೇವಳದಲ್ಲಿ ಕೊನೆಯ ದಿನದ ಶರನ್ನವರಾತ್ರಿ ಪೂಜಾ ಕಾರ್ಯಕ್ರಮಗಳು ನೆರವೆರಿತು,


ವಿಜಯದಶಮಿ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯವನ್ನು ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ದಂಪತಿಗಳು ಉಪಸ್ಥಿತಿಯಲ್ಲಿ ಪುತ್ರರಾದ ಪ್ರಶಾಂತ್ ಕುಂದರ್ ದಂಪತಿ,ರಕ್ಷಿತ್ ಕುಂದರ್ ದಂಪತಿಗಳು ಸೇವಾರೂಪದಲ್ಲಿ ಚಂಡಿಕಾಸಪ್ತಶತಿ ಪಾರಾಯಣ,ದುರ್ಗಾಯಾಗದಲ್ಲಿ ಭಾಗಿಯಾದರು.

Click Here

ಧಾರ್ಮಿಕ ಕಾರ್ಯಕ್ರಮಗಳನ್ನು ವೇ.ಮೂ.ಮಧುಸೂದನ ಬಾಯರಿ ನೇತ್ರತ್ವದಲ್ಲಿ ನಡೆದವು.

ಈ ಸಂದರ್ಭದಲ್ಲಿ ಉದ್ಯಮಿ ಮಲ್ಪೆ ಆನಂದ್ ಸುವರ್ಣ ಕುಟುಂಬಸ್ಥರು,ಕುಂದರ್ ಕುಟುಂಬಸ್ಥರು, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಎಂ.ಸುಬ್ರಾಯ ಆಚಾರ್ಯ, ಚಂದ್ರ ಪೂಜಾರಿ,ಜಿ.ಸತೀಶ್ ಹೆಗ್ಡೆ,, ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ,ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚಂದ್ರ ಆಚಾರ್ಯ,ಸುಶೀಲ ಸೋಮಶೇಖರ್,ಜ್ಯೋತಿ ಬಿ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ್, ಶ್ರೀ ದೇವಳದ ಅರ್ಚಕ ಪ್ರತಿನಿಧಿಗಳಾದ ಅಮೃತ್ ಜೋಗಿ,ರೂಪೇಶ್ ಜೋಗಿ,ಪ್ರಕಾಶ್ ಜೋಗಿ,ಸಂತೋಷ್ ಜೋಗಿ,ದಾಮೋದರ ಜೋಗಿ,ಮತ್ತಿತರರು ಉಪಸ್ಥಿತರಿದ್ದರು.

ಸಹಸ್ರ ಸಂಖ್ಯೆಯಲ್ಲಿ ಹರಿದುಬಂದ ಭಕ್ತಸಾಗರ
ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಶ್ರೀದೇವಳದಲ್ಲಿ ಅನ್ನಪ್ರಸಾದದಿಂದ ಹೊರಗಿಡಲಾಯಿತ್ತಾದರೂ ಕೊನೆಯ ದಿನವಾದ ವಿಜಯದಶಮಿ ಅಂಗವಾಗಿ ಅನ್ನಪ್ರಸಾದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು ಆ ನಿಮಿತ್ತ ಭಕ್ತಸಮುದಾಯ ಸಾಕಷ್ಟು ಪ್ರಮಾಣದಲ್ಲಿ ಶ್ರೀದೇವಳಕ್ಕೆ ಹರಿದುಬಂತು.

ಪುರಾಣಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಸಂತಾನ ಭಾಗ್ಯ ಕರುಣಿಸುವ ಹಲವು ಮಕ್ಕಳ ತಾಯಿ ಕೋಟ ಅಮೃತೇಶ್ವರಿ ದೇವಳದಲ್ಲಿ ಕೊನೆಯ ದಿನದ ಶರನ್ನವರಾತ್ರಿ ಪೂಜಾ ಕಾರ್ಯಕ್ರಮಗಳು ನೆರವೆರಿತು, ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ದಂಪತಿಗಳು ಉಪಸ್ಥಿತಿಯಲ್ಲಿ ಪುತ್ರರಾದ ಪ್ರಶಾಂತ್ ಕುಂದರ್ ದಂಪತಿ,ರಕ್ಷಿತ್ ಕುಂದರ್ ದಂಪತಿಗಳು ಸೇವಾರೂಪದಲ್ಲಿ ಚಂಡಿಕಾಸಪ್ತಶತಿ ಪಾರಾಯಣ,ದುರ್ಗಾಯಾಗದಲ್ಲಿ ಭಾಗಿಯಾದರು.

Click Here

LEAVE A REPLY

Please enter your comment!
Please enter your name here