ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೊಪ್ಪಲಂಗಡಿಯ ವೀರಪ್ಪ ಎಮ್ ಸಾಲ್ಯಾನ್ ಅವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮ ಫಲಕ ಅನಾವರಣ.
ಸ್ವರಾಜ್ಯ ೭೫ ತಂಡದ 28ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾರ್ಯಕ್ರಮ ಜೊತೆಯಾದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಕಾಳಾವಾರ ವರದರಾಜ್ ಎಮ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ, ಹಸ್ತ ಚಿತ್ರ ಫೌಂಡೇಶನ್ ರಿಂದ ವಕ್ವಾಡಿ, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಉಸಿರು ಕೋಟ, ಸರಸ್ವತಿ ಮಂದಿರ ಪ್ರೌಢಶಾಲೆ ಉಚ್ಚಿಲ, ಡಾ.ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ, ಕಾಪು ಕ್ಷೇತ್ರ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ವಿವಿಧೋದ್ಧೇಶ ಸಹಕಾರಿ ಸಂಘ ನಿ. ಕಾಪು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಕಾರ್ಯಕ್ರಮ (“ಸ್ವರಾಜ್ಯ ೭೫ ತಂಡದೊಂದಿಗೆ) ಯಶಸ್ವಿಗೊಳಿಸಲಾಯಿತು.
ಪ್ರಾಂಶುಪಾಲರು ಡಾ.ಭಾಸ್ಕರ್ ಶೆಟ್ಟಿ ಸಳ್ವಾಡಿ ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚೆನೆಗೈಯುವ ಮೂಲಕ ಚಾಲನೆ ನೀಡಿದರು. ಮಾಧವ್ ಪಾಲನ್ ಕಾಪು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆಯ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ನಾಮಫಲಕ ಅನಾವರಣ ಮಾಡಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯ ರ ಕೊಡುಗೆಯೊಂದಿಗೆ ವಿಚಾರದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ರಾಮದಾಸ್ ಪ್ರಭು ವಿಚಾರ ಹಂಚಿಕೊಂಡರು. ಕೊಪ್ಪಲಂಗಡಿ ವೀರಪ್ಪ ಎಮ್ ಸಾಲ್ಯಾನ್ ಇವರ ವಿಚಾರವನ್ನು ಅನನ್ಯ ಹಂಚಿಕೊಂಡರು.
ಗಣ್ಯರಾಗಿ ಪುಂಡಲೀಕ ಮರಾಠೆ , ಬಾಬುರಾಯ್ ಆಚಾರ್ಯ, ಸುಲೋಚನ ಎಸ್.ಪಾಲನ್ , ಪ್ರಭಾವತಿ ಪಿ.ಸಾಲ್ಯಾನ್ , ವಿಚಾರ ಹಂಚಿಕೊಂಡರು
ಕಾರ್ಯಕ್ರಮದಲ ಅಧ್ಯಕ್ಷತೆಯನ್ನು ಕಾಪು ಕ್ಷೇತ್ರ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ವಿವಿಧೋದ್ಧೇಶ ಸಹಕಾರಿ ಸಂಘ ನಿ ಕಾಪು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಾವಿತ್ರಿ ಗಣೇಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂತೋಷ್ ಎಸ್.ನಾಯಕ್ ,ಪ್ರಮೋದ್ ಶಂಕರನಾರಾಯಣ, ರಾಷ್ಟ್ರೀಯ ಸೇವಾ ಯೋಜನೆ ಘಟಕ ವಿದ್ಯಾರ್ಥಿ ಕುಟುಂಬಸ್ಥರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ವಿಚಾರವನ್ನು ಕಾರ್ಯಕ್ರಮದ ಸಂಚಾಲಕರು ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು. ನಿರೂಪಣೆಯನ್ನು ದಿವ್ಯಾ ಸ್ವಾಗತ ಕಾರ್ತಿಕ್ ಹಾಗೂ ಅಂಜನಾ ಕಾಮತ್ ವಂದಿಸಿದರು.











