ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಜೇಸಿಐ ಕಲ್ಯಾಣಪುರದ 22ನೇ ವರ್ಷದ ಪದಪ್ರದಾನ ಸಮಾರಂಭ ಬ್ರಹ್ಮಾವರದ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿತು. 2023ನೇ ಸಾಲಿನ ಅಧ್ಯಕ್ಷರಾದ ಅನಿತಾ ನರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಗತವರ್ಷದ ವರದಿ ಮಂಡಿಸಿ ತಮ್ಮ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಸದಸ್ಯರನ್ನು ಅಭಿನಂದಿಸಿದರು.
2024ನೇ ಸಾಲಿನ ಅಧ್ಯಕ್ಷ ವಿವೇಕ್‍ರವರಿಗೆ ವಲಯ ಉಪಾಧ್ಯಕ್ಷರಾದ ದೀಪಕ್‍ರಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿ ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ಅಲನ್ ರೋಹನ್ ವಾಜ್ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿದರು. ಘಟಕದ ವತಿಯಿಂದ ಅನಾರೋಗ್ಯ ಪೀಡಿತರಿಗೆ ಧನ ಸಹಾಯ ನೀಡಲಾಯಿತು. ನಿರ್ಗಮನ ಅಧ್ಯಕ್ಷೆ ಅನಿತಾ ನರೇಂದ್ರಕುಮಾರ್‍ರವರನ್ನು ಅವರ ಸಾಧನೆಗಾಗಿ ಸನ್ಮಾನಿಸಲಾಯಿತು
ಕಾರ್ಯಕ್ರಮದ ವೇದಿಕೆಗೆ ಚಿತ್ರಕುಮಾರ್ ಆಹ್ವಾನಿಸಿದರು. ರಶ್ಮಿ ಸುರೇಶ್ ಜೇಸಿ ವಾಣಿ ಉದ್ಘೋಷಿಸಿದರು. ಆಶಾ ಅಲನ್, ಪೂಜಾ ಶೆಟ್ಟಿ ಹಾಗೂ ನಿತ್ಯಾನಂದ ನೇಜಾರು ಪರಿಚಯಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಜಯಶ್ರೀ ಮಿತ್ರಕುಮಾರ್, ಕಾರ್ಯದರ್ಶಿ ಲವೀನಾ ಲೂವಿಸ್, ಲೇಡಿ ಜೇಸಿ ಸಂಯೋಜಕಿ ಶಾಲಿನಿ ಸುರೇಶ್, ಜೂ. ಜೇಸಿ ಅಧ್ಯಕ್ಷ ನಿರಂತರ ಎನ್., ಪದಾಧಿಕಾರಿಗಳಾದ ಅನುಸೂಯ ಅನಿಲ್, ವೇದಾಂತ್ ಜೆ, ಕಾರ್ಯಕ್ರಮ ನಿರ್ದೇಶಕ ಗುಣವರ್ಮ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಶಶಾಂಕ್ ವಂದಿಸಿದರು.











