ಕೋಟ :ಲೋಕ ಕಲ್ಯಾಣಾರ್ಥವಾಗಿ ಶಾಂತಿಮತೀ ಪ್ರತಿಷ್ಠಾನದ ನೇತೃತ್ವದಲ್ಲಿ ಕೋಟಿ ಗಾಯತ್ರೀ, ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ

0
307

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತನ್ನದೆ ಆದ ಕಾರ್ಯಕ್ರಮಗಳನ್ನು ನೀಡಿ ಸಮಾಜದ ಹಾಗೂ ಸಮುದಾಯ ಸಾಧಕರನ್ನು ಗುರುತಿಸಿ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುತ್ತಾ ಬಂದಿರುವಾ ಶ್ರೀ ಶಾಂತಿ ಮತೀ ಪ್ರತಿಷ್ಠಾನ ಇದೀಗ ಉಡುಪಿ ಜಿಲ್ಲೆಯಲ್ಲೆ ಮೊಟ್ಟ ಮೊದಲ ಬಾರಿಗೆ ಕೋಟಿ ಗಾಯತ್ರೀ ಮಹಾಯಾಗ ಹಾಗೂ ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ ಹಮ್ಮಿಕೊಂಡಿದ್ದು ಇದೇ ಬರುವ ಡಿ.28, 29, 30ರಂದು ಮೂರು ದಿನಗಳ ಕಾಲ ಸಾಂಸ್ಕೃತಿಕ ನಗರಿ ಕೋಟದ ಮಹತೋಭಾರ ಹಿರೇ ಮಹಾಲಿಂಗೇಶ್ವರನ ಸಾನಿಧ್ಯದಲ್ಲಿ ನಡೆಸಲಿದೆ.

ಇದಕ್ಕಾಗಿ ಸಾಕಷ್ಟು ಪೂರ್ವಭಾವಿ ಸಭೆಗಳನ್ನು ಆಯೋಜಿಸಿ ಕಾರ್ಯಕ್ರಮದ ರೂಪುರೇಖೆಗಳನ್ನು ಸಿದ್ಧಪಡಿಸಿಕೊಂಡಿದೆ.

ಮಹಾಯಾಗದ ಅಧ್ಯಕ್ಷ ಡಾ.ವಿದ್ವಾನ್ ವಿಜಯ ಮಂಜರ್ ಪಾಂಡೇಶ್ವರ ಹಾಗೂ ಶ್ರೀ ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ ವಡ್ಡರ್ಸೆ ಇವರ ಸಾರಥ್ಯದಲ್ಲಿ ಈ ಧಾರ್ಮಿಕ ಪ್ರಜ್ಞಾ ಕಾರ್ಯಕ್ರಮ ನೆರವೆರಲಿದೆ.

Click Here

ದಶಮಾನೋತ್ಸವಕ್ಕೆ ಹೊಸ ಮೆರುಗು
ಶ್ರೀ ಶಾಂತಿಮತೀ ಪ್ರತಿಷ್ಠಾನ ಸಂಸ್ಥೆ ತನ್ನ ಸಾಮಾಜಿಕ ,ಧಾರ್ಮಿಕ ಕಾರ್ಯಕ್ರಮಗಳ ನಡುವೆ ಇತ್ತೀಚಿಗಿನ ದಿನಗಳಲ್ಲಿ ಮರೆಯಾಗುತ್ತಿರುವ ಗಾಯತ್ರೀ ಮಂತ್ರ, ವಿಷ್ಣು ಸಹಸ್ರನಾಮ,ಲಲಿತಾ ಸಹಸ್ರನಾಮ ಹೀಗೆ ಹಲವು ಬಗೆಯ ಮಂತ್ರಘೋಷಗಳನ್ನು ಇಂದಿನ ಯುವ ಸಮುದಾಯದಲ್ಲಿ ನೆಲೆಯೂರಲು ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡು ಯಶಸ್ಸಿನ ತೇರಾಗಿಸಿಕೊಂಡಿದ್ದಾರೆ.

ಇದೀಗ ಈ ಸಂಸ್ಥೆಗೆ ದಶಮಾನೋತ್ಸವ ಸಂಭ್ರಮ ಈ ಹಿನ್ನಲೆಯನ್ನು ಮನದಲ್ಲಿಟ್ಟುಕೊಂಡು ವಿವಿಧ ರೀತಿಯ ಧಾರ್ಮಿಕ ಮಹಾಯಾಗಗಳನ್ನು ಆಯೋಜಿಸಿಕೊಂಡಿದೆ.

ಕಾರ್ಯಕ್ರಮದ ಕರಿತು ಪ್ರತಿಕಾಘೋಷ್ಠಿ
ಇದೇ ಬರುವ ಡಿ.28, 29, 30 ಮೂರು ದಿನಗಳ ಕಾಲ ಕೋಟದ ಮಹತೋಭಾರ ಹಿರೇ ಮಹಾಲಿಂಗೇಶ್ವರ ದೇವಸ್ಥಾನ ಸನ್ನಿಧಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು 28ರಂದು ಪೂರ್ವಾಹ್ನ ದೇವತಾ ಪ್ರಾರ್ಥನೆ,ಸ್ವಸ್ತಿ ವಾಚನ,ಮೂಲಕ ಮುಲ್ಲೆ ಮಹಾಗಣಪತಿಗೆ ರಂಗಪೂಜೆ,ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ದುರ್ಗಾಹೋಮ,ಮಹಾಲಿಂಗೇಶ್ವರನಿಗೆ ಶತರುದ್ರಾಭಿಷೇಕ, ಮಹಾಪೂಜೆ , ಅಪರಾಹ್ನ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಿಂದ ಕುಣಿತ ಭಜನೆ,ಸ್ತಬ್ಧ ಚಿತ್ರ,ಚಂಡೆ ವಾದ್ಯಗಳೊಂದಿಗೆ ಗಾಯತ್ರೀ ದೇವಿಯ ಪುರಮೆರವಣಿಗೆ ದಿವ್ಯ ಶೋಭಯಾತ್ರೆ , ಸಂಜೆ, ಯಾಗಶಾಲೆ ಪ್ರವೇಶ, ಕಲಶಸ್ಥಾಪನೆ, ಮಹಾಪೂಜೆ, ಅಷ್ಟಾವಧಾನ ಸೇವೆ ಪ್ರಸಾದ ವಿತರಣೆ , 29ರಂದು ಪೂರ್ವಾಹ್ನ ನವಕುಂಡಗಳಲ್ಲಿವ ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಲಿತಾ ಸಹಸ್ರನಾಮ ಮಹಾಯಾಗ ವೇ.ಮೂ. ಹೃಷಿಕೇಶ್ ಬಾಯರಿ ಬಾರಕೂರು ಹಾಗೂ ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್ ಇವರ ನೇತೃತ್ವದಲ್ಲಿ ಯಾಗಗಳು ನೆರವೆರಲಿದೆ.

8.ಗ ಯಿಂದ ಒಂದು ಸಾವಿರ ಅಧಿಕ ವಿಪ್ರ ಮಹಿಳೆಯರಿಂದ ಲಕ್ಷ ಲಿಲಿತಾ ಸಹಸ್ರನಾಮ ಅಭಿಯಾನ,ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ನಡೆಯಲಿದೆ.10ಗ ಇದರ ಪೂರ್ಣಾಹುತಿ,ಧಾರ್ಮಿಕ ಸಭಾಕಾರ್ಯಕ್ರಮ ಜರಗಲಿದೆ.
30ರಂದು ಪೂರ್ವಾಹ್ನ 6ರಿಂದ ಕೋಟಿ ಗಾಯತ್ರೀ ಮಹಾಯಾಗ,9.30ಕ್ಕೆ ಕೋಟಿ ಗಾಯತ್ರೀ ಮಹಾಯಾಗದ ಪೂರ್ಣಾಹುತಿ,ಪ್ರಸಾದ ವಿತರಣೆ,ಮಹಾ ಮಂತ್ರಾಕ್ಷತೆ, 10ಕ್ಕೆ ಸಮಾರೋಪಸಮಾರಂಭ ಅಪರಾಹ್ನ ಸಾರ್ವಜನಿಕ ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳು,ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಪ್ರಮುಖರಾಗಿವ ಆಧ್ಯಾತ್ಮ ಚಿಂತಕ ವಿದ್ಯಾಚಸ್ಪತಿ ವಿದ್ವಾನಗ ಉಮಾಕಾಂತ್ ಭಟ್ ಕೆರಕೈ ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಅಧ್ಯಕ್ಷ ಅಶೋಕ್ ಹಾರನಹಳ್ಳಿ,ಕರ್ಣಾಟಕ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್,ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಹಾಯಾಗದ ಸಮಿತಿ ಅಧ್ಯಕ್ಷ ವಿದ್ವಾನ್ ವಿಜಯ್ ಮಂಜರ್ ತಿಳಿಸಿದರು.

Click Here

LEAVE A REPLY

Please enter your comment!
Please enter your name here