ಕುಂದಾಪುರ ಮಿರರ್ ಸುದ್ದಿ…

ಕೋಟ :ಬಾಳೆಬೆಟ್ಟು ಫ್ರೆಂಡ್ಸ್ (ರಿ.)ಬಾಳೆಬೆಟ್ಟು
ಭಗತ್ ಸಿಂಗ್ ಯುವ ವೇದಿಕೆ (ರಿ.)ಕೋಟ ಪ್ರಸ್ತುತಿಯಲ್ಲಿ ಜ.14ರಂದು ಭಾನುವಾರ ಸಂಜೆ 6ರಿಂದ ಸ್ಪರ್ಶ – 2024 ಸಾಮರಸ್ಯದ ಭಾವಕೋಶ ಕಾರ್ಯಕ್ರಮ ನಡೆಯಲಿದ್ದು , ಸಾಲಿಗ್ರಾಮದ ಪ್ರಖ್ಯಾತ ವೈದ್ಯರು, ಜನಾನುರಾಗಿ ಡಾ.ಪಿ.ಸಿ ಸುಧಾಕರ್ ರವರಿಗೆ ಹುಟ್ಟೂರ ಸನ್ಮಾನ ನಡೆಯಲಿದ್ದು ಹಲವು ರಾಜಕೀಯ ಮುಖಂಡರು ಮತ್ತು ಉದ್ಯಮಿಗಳು ಆಗಮಿಸಲಿದ್ದಾರೆ, ಹಾಗೂ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಕಾಂತಾರ ಚಲನಚಿತ್ರ ನಾಯಕ ನಟಿ ಸಪ್ತಮಿ ಗೌಡ ಆಗಮಿಸಲಿದ್ದಾರೆ. ಸ್ಥಳೀಯ ಸಮಾಜ ಸೇವಕರು ಮತ್ತು ಕೃಷಿ ಕ್ಷೇತ್ರದ ಸಾಧಕರಿಗೆ ವಿಶೇಷ ಅಭಿನಂದನೆ ಹಾಗೂ ಪರಿಸರದ ಮಾದರಿ ಸಂಘಟನೆಗಳಿಗೆ ಗೌರವ ಸಮರ್ಪಣೆ ನಡೆಯಲಿದ್ದು, ಅಶಕ್ತರಿಗೆ ಸಹಾಯಧನ ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ನಡೆಯಲಿದೆ.
ಸ್ಥಳೀಯ ನೃತ್ಯ ತಂಡ KDC ಡ್ಯಾನ್ಸ್ ಧಮಾಕ ಮತ್ತು ಅಂಗನವಾಡಿ ಪುಟಾಣಿಗಳ ನೃತ್ಯ ವೈವಿಧ್ಯ,
ನಂತರ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕಾಲಮಿತಿ ಯಕ್ಷಗಾನ ಶಿವರಂಜಿನಿ
ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.











