ಕುಂದಾಪುರ ‌ಜಿಲ್ಲಾ ಹೋರಾಟ ಸಮಿತಿ ನಿಯೋಗ ಕೆ.ಪ್ರತಾಪಚಂದ್ರ ಶೆಟ್ಟಿ ಅವರಿಗೆ ಮನವಿ

0
481

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ಜಿಲ್ಲಾ ಹೋರಾಟ ಸಮಿತಿ, ಅಧ್ಯಕ್ಷರಾದ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಮಾರ್ಗದರ್ಶನದ ನಿಯೋಗ ಇತ್ತೀಚೆಗೆ ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷರಾದ ಹಾಗೂ ವಿಧಾನಪರಿಷತ್ ಸದಸ್ಯರಾಗಿರುವ ಕೆ.ಪ್ರತಾಪಚಂದ್ರಶೆಟ್ಟಿ ಅವರನ್ನು ಭೇಟಿಯಾಗಿ ನೂತನ ಕುಂದಾಪುರ ಜಿಲ್ಲೆಯ ಬೇಡಿಕೆಯ ಬಗ್ಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಕೆ.ಪ್ರತಾಪ್ ಚಂದ್ರ ಶೆಟ್ಟಿ ಅವರು ಕುಂದಾಪುರ ಜಿಲ್ಲೆ ಆಗುವ ಬಗ್ಗೆ ಸಹಮತ ವ್ಯಕ್ತಪಡಿಸಿದ ಅವರು ಪೂರಕ ಮಾಹಿತಿಯನ್ನು ನೀಡಿದರು.

Click Here

ಈ ಸಂದರ್ಭದಲ್ಲಿ ಕುಂದಾಪುರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ಮುಂಬಾರು ದಿನಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಣಪತಿ ಟಿ.ಶ್ರೀಯಾನ್,ಉಪಾಧ್ಯಕ್ಷ ದಸ್ತಗಿರಿ ಕಾವ್ರಾಡಿ, ಭುಜಂಗ ಶೆಟ್ಟಿ ಮುಳ್ಳುಗುಡ್ಡಿ,ಗೋಪಾಲ ಶೆಟ್ಟಿ, ಕಿರಣ್ ಕ್ರಾಸ್ತ ಕನ್ನಡಕುದ್ರು, ಕೆ.ಆರ್.ನಾಯಕ್,ಸಂತೋಷ ಶೆಟ್ಟಿ ಬಲಾಡಿ, ಗೋವಿಂದ ಶೇರಿಗಾರ್ ಗಂಗೊಳ್ಳಿ, ಚಂದ್ರಶೇಖರ್ ಆಚಾರ್ಯ, ಓಂ ಗುರು ಬಸ್ರೂರು, ಫಜಲ್ ನೇರಳಕಟ್ಟೆ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here