ಕುಂದಾಪುರ ಮಿರರ್ ಸುದ್ದಿ…
ಕೋಟ: ನಿರರ್ಗಳವಾಗಿ ಕನ್ನಡವನ್ನು ತನ್ನ ವಾಕ್ಚಾತುರ್ಯದ ಮೂಲಕ ಮನೆಯನ್ನು ಬೆಳಗಿಸುವಲ್ಲಿ ಶುಭ ಹಾರೈಸುವ ಮಕ್ಕಳು ಕೋಟ ಪೋಲೀಸ್ ಠಾಣೆಗೂ ಬಂದು ಶುಭ ನುಡಿದಿದ್ದಾರೆ. ದಿನವಿಡೀ ವೃತ್ತಿ ಕಾಯಕದಲ್ಲಿ ತೊಡಗಿಕೊಂಡಿರುವ ನಾವು ಶರನ್ನವರಾತ್ರಿಯ ಆಚರಣೆಯ ಕ್ಷಣದಲ್ಲಿರುವ ಸಂದರ್ಭದಲ್ಲೆ ನಮ್ಮ ಠಾಣೆಗೆ ಬಂದು ನಮ್ಮೊಂದಿಗೆ ಮಕ್ಕಳು ಸಂಭ್ರಮಿಸಿದ ಕ್ಷಣವನ್ನು ಕೋಟ ಠಾಣೆಯ ಕ್ರೈಂ ವಿಭಾಗದ ಪಿ. ಎಸ್. ಐ ಪುಷ್ಪರಾಮ್ ಯಶಸ್ವಿ ಕಲಾವೃಂದದ ಚಿಣ್ಣರನ್ನು ಕೊಂಡಾಡಿದರು.
ತೆಕ್ಕಟ್ಟೆಯ ಯಶಸ್ವಿ ಕಲಾವೃಂದದ ಪುಟಾಣಿಗಳ ಹೂವಿನಕೋಲು ಕಾರ್ಯಕ್ರಮವನ್ನು ಅ.14ರಂದು ಕೋಟ ಪೋಲೀಸ್ ಠಾಣೆಯಲ್ಲಿ ಆಯೋಜಿಸಿಕೊಂಡಾಗ ಪಿ.ಎಸ್.ಐ ಮಾತನಾಡಿದರು.
ಕೋಟ ಪೋಲೀಸ್ ಠಾಣೆಯ ಸುರೇಶ್ ಶೆಟ್ಟಿ, ರೇವತಿ, ರಾಜು, ಕೃಷ್ಣ, ಪ್ರಮೋದ್, ರಾಘವೇಂದ್ರ ಹಾಗೂ ಯಶಸ್ವಿ ಕಲಾವೃಂದ ಕೊಮೆ ಇಲ್ಲಿನ ಗುರುಗಳಾದ ದೇವದಾಸ್ ರಾವ್ ಕೂಡ್ಲಿ ಉಪಸ್ಥಿತರಿದ್ದರು.











