ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಶಂಕರನಾರಾಯಣ ದೇವಸ್ಥಾನ ಪಾಂಡೇಶ್ವರ ಇಲ್ಲಿ ಅಯೋಧ್ಯಾ ಶ್ರೀ ರಾಮ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಜನೆ, ಮಹಾಮಂಗಳಾರತಿ ಪ್ರಸಾದ ವಿತರಣಾ ಕಾರ್ಯಕ್ರಮಗಳು ಜರಗಿದವು.
ಭಕ್ತಾಧಿಗಳಿಗೆ ವೀಕ್ಷಿಸಲು ಸಲುವಾಗಿ ಡಿಜಿಟಲ್ ಪರದೆಯ ಮೂಲಕ ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಲಾಯಿತು. ಪೂರ್ವಾಹ್ನ ಉಪಹಾರ, ಪಾನಕ ವ್ಯವಸ್ಥೆ, ಅನ್ನಸಂತರ್ಪಣೆ, ಕರಸೇವಕ ರಾಜು ಪೂಜಾರಿಯವರಿಗೆ ಸನ್ಮಾನ ಕಾರ್ಯಕ್ರಮ ನೆರವೆರಿತು. ಸ್ಥಳೀಯ 5 ಭಜನೆ ತಂಡಗಳಿಂದ ಭಜನೆ ಕಾರ್ಯಕ್ರಮ ಸಂಪನ್ನಗೊಂಡಿತು.
ಗ್ರಾಮ ಪ್ರಮುಖರಾದ ಕೆ.ವಿ ರಮೇಶ್ ರಾವ್ , ವಿದ್ಚಾನ್ ಡಾ.ವಿಜಯ್ ಮಂಜರ್. ರಾಮೋತ್ಸವ ಸಂಚಾಲಕರಾದ ಪ್ರತಾಪ್ ಶೆಟ್ಟಿ , ಸುರೇಶ ಪೂಜಾರಿ ಹಿಂದೂ ಸಂಘಟನೆ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.











