ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಜಿ.ಎಸ್.ಬಿ. ಸೇವಾ ಟ್ರಸ್ಟ್ ಕುಂಭಾಸಿ ಇವರು ನೂತನವಾಗಿ ನಿರ್ಮಿಸಲಿರುವ ಭಜನಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮವು ಅ.15ರಂದು ವೇ.ಮೂ ಕೋಟಾ ಕಪಿಲದಾಸ್ ಭಟ್ ಹಾಗೂ ವೇ.ಮೂ ರಾಮಚಂದ್ರ ಭಟ್ ಸಾವಡಾ ಇವರ ಪೌರೋಹಿತ್ಯದಲ್ಲಿ ಟ್ರಸ್ಟಿನ ಅಧ್ಯಕ್ಷ ಕೆ. ಗಣೇಶ ಪ್ರಭು ಹಾಗೂ ಸರ್ವ ವಿಶ್ವಸ್ತ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಮಂಜೇಶ್ವರ ಶ್ರೀಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ದಿನೇಶ್ ಕಾಮತ್ ಕೋಟೇಶ್ವರ, ಜಿ.ಎಸ್.ಬಿ. ಸೇವಾ ಸಂಘ ತೆಕ್ಕಟ್ಟೆ ಇದರ ಅಧ್ಯಕ್ಷ ಟಿ. ಸಂತೋಷ್ ನಾಯಕ್, ಉದ್ಯಮಿಗಳಾದ ಅನಂತ್ ನಾಯಕ್ ತೆಕ್ಕಟ್ಟೆ, ರಾಧಾಕೃಷ್ಣ ನಾಯಕ್ ಕೋಟಾ, ಸ್ಥಳ ದಾನಿಗಳ ಪರವಾಗಿ ನಾಗೇಶ್ ಶಾನುಭಾಗ್ ಸಾಲಿಗ್ರಾಮ, ಜಿ.ಎಸ್.ಬಿ ಸೇವಾ ಟ್ರಸ್ಟ್ ಕುಂಭಾಶಿಯ ಪದಾಧಿಕಾರಿಗಳು, ಗ್ರಾಮದ ಗೌಡ ಸಾರಸ್ವತ ಸಮಾಜದ ಸದಸ್ಯರು ಉಪಸ್ಥಿತರಿದ್ದರು.











