ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆದ್ಯತೆ ನೀಡಬೇಕಾಗಿದೆ ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಅವರ ಕುಂದಾಪುರದ ಹೃದಯಭಾಗ ಶಾಸ್ತ್ರೀ ವೃತ್ತದ ಸಮೀಪ ನೂತನವಾಗಿ ತಲೆಎತ್ತಿದ ಹೊಟೇಲ್ ಯುವಮನೀಶ್ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿಗಳಿಗೆ ಅವಕಾಶವಿದ್ದರೆ ಸಾಲದು, ಅದನ್ನು ಗುರುತಿಸಿ ಆದ್ಯತೆ ನೀಡುವ ಇಚ್ಚಾಶಕ್ತಿ ತೋರಿದಲ್ಲಿ ಜಗತ್ತೇ ತಿರುಗಿನೋಡುವಂತಾಗುತ್ತದೆ ಎಂದರು.
ದೀಪ ಬೆಳಗಿಸಿದ ಮಾಜೀ ಸಚಿವ ಬಾಲಚಂದ್ರ ಜಾರಕೀಹೊಳಿ ಮಾತನಾಡಿ, ಕಠಿಣ ಪರಿಶ್ರಮದಿಂದ ಮಾಡುವ ಯಾವುದೇ ಕೆಲಸಗಳು ಯಶಸ್ಸಾಗುತ್ತದೆ ಎಂದರು.
ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠ, ಘಟಪ್ರಭಾ ಇಲ್ಲಿನ ಮ.ನಿ.ಪ್ರ. ಡಾ| ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ಮಾಡುತ್ತಾ, ಯಾರು ತಾವು ಮಾಡುವ ಕಾಯಕವನ್ನು ಪ್ರೀತಿಸುತ್ತಾರೋ ಅವರು ಜೀವನದುದ್ದಕ್ಕೂ ಹೆಸರು ಮಾಡುತ್ತಾರೆ. ಅಂತಹಾ ವ್ಯಕ್ತಿತ್ವವನ್ನು ಉದಯಕುಮಾರ್ ಸಹೋದರರು ಹಾಗೂ ಜಯಶೀಲ್ ಶೆಟ್ಟಿ ಕುಟುಂಬ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಬೆಂಗಳೂರು- ಉಡುಪಿ- ಕುಂದಾಪುರ ಎಕ್ಸ್ ಪ್ರೆಸ್ ಕಾರೀಡಾರ್ ನಿರ್ಮಿಸುವ ಯೋಚನೆಯಿದ್ದು ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಜೊತೆಗೆ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಲಾಗಿದೆ. ಅದೇ ರೀತಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಮೂಲಾಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.
ಹಿಂದುಳಿದ ವರ್ಗಗಳ ಶಾಶ್ಚತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಶ್ರೀನಿವಾಸ್, ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ, ಪತ್ರಕರ್ತ ವಿಶ್ವೇಶ್ವರ ಭಟ್, ರೆಡಿಸ್‌ಸನ್ ಬ್ಲೂ ಆರ್ಟಿಯಾ ಬೆಂಗಳೂರು ಇದರ ನಿರ್ದೇಶಕ ಕೆ. ನಾಗರಾಜ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪಾಲುದಾರರಾದ ಬಿ. ಉದಯಕುಮಾರ್ ಶೆಟ್ಟಿ, ಬಿ ವಿನಯಕುಮಾರ್ ಶೆಟ್ಟಿ, ಜಯಶೀಲ್ ಶೆಟ್ಟಿ, ಮನೀಶ್ ಜೆ ಶೆಟ್ಟಿ ಉಪಸ್ಥಿತರಿದ್ದರು.
ಪಾಲುದಾರರಾದ ಬಿ. ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಜಯಶೀಲ್ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.











