ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಉಪ್ಪುಂದ ಗ್ರಾಮದ ಸಂಕದಬಾಗಿಲು ಗೋವಿಂದ ಖಾರ್ವಿ ಇವರ ಮನೆಗೆ ‘ಸ್ವಾತಂತ್ರ್ಯ ಹೋರಾಟಗಾರರ ಮನೆ’ ನಾಮಫಲಕ ಅನಾವರಣ ಕಾರ್ಯಕ್ರಮ ಅ.17ರಂದು ನಡೆಯಿತು. ಸಾಹಿತಿ ರಮೇಶ್ ವೈದ್ಯ ನಾಮಫಲಕ ಅನಾವರಣಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಖಾರ್ವಿ ವಹಿಸಿದ್ದರು. ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೈಂದೂರು ಚಂದ್ರಶೇಖರ ನಾವುಡರು “ಭಾರತ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಮತ್ತು ಉಪ್ಪುಂದ ಗೋವಿಂದ ಖಾರ್ವಿ ಇವರ ಸೇವೆ” ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೆ ಜನ ಸೇವಾ ಟ್ರಸ್ಟ್ (ರಿ) ಮೂಡುಗಿಳಿಯಾರು ಹಾಗೂ ಗೋವಿಂದ ಖಾರ್ವಿ ಕುಟುಂಬಸ್ಥರು ಸಹಕಾರ ನೀಡಿದ್ದರು.
ಅಧ್ಯಾಪಕ ರವೀಂದ್ರ ಹೆಚ್ ಕಾರ್ಯ ಕ್ರಮ ನಿರೂಪಿಸಿರು. “ಸ್ವರಾಜ್ಯ 75” ಕಾರ್ಯಕ್ರಮ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಸನ್ನ ಖಾರ್ವಿ ವಂದಿಸಿದರು.











