ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಉಚಿತ ಸಾಮೂಹಿಕ ವಿವಾಹ – ದಾಂಪತ್ಯ ಜೀವನಕ್ಕೆ ಪಾದಾರ್ಪಣೆಗೈದ ಐದು ಜೋಡಿಗಳು

0
311

Click Here

Click Here

ಕುಂದಾಪುರ ಮಿರರ್ ಸುದ್ದಿ…

Video:

Click Here

ಕುಂದಾಪುರ: ಕರ್ನಾಟಕ ಸರ್ಕಾರದ ಮಾಂಗಲ್ಯ ಭಾಗ್ಯ ಯೋಜನೆಯಡಿಯಲ್ಲಿ ಕೊಲ್ಲೂರು ಶ್ರೀ ಮಾಕಾಂಬಿಕಾ ದೇವಸ್ಥಾನದಲ್ಲಿ ನಡೆದ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಬುಧವಾರ ನಡೆಯಿತು. ಮಧ್ಯಾಹ್ನ ಅಭಿಜಿನ್ ಲಗ್ನ ಸಮುಹೂರ್ತದಲ್ಲಿ ಬೆಳಿಗ್ಗೆ 11.20 ರಿಂದ 12.20 ರವರೆಗೆ ವಿವಾಹ ಕಾರ್ಯಕ್ರಮ ನಡೆಯಿತು. ಸುಬ್ರಹ್ಮಣ್ಯ ಪೂಜಾರಿ – ಅಶ್ವಿನಿ, ಅಜಿತ – ಮೂಕಾಂಬು, ವಿಠಲ – ಅನಿತ, ಅನಿಲ್ – ವಸಂತಿ, ಚಂದ್ರಶೇಖರ – ಜಲಜಾ ದಂಪತಿಗಳೇ ಹಸೆಮಣೆಯೇರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದವರು.

ಈ ಸಂದರ್ಭ ಸರ್ಕಾರದ ವತಿಯಿಂದ ವರನಿಗೆ ಪ್ರೋತ್ಸಾಹ ಧನ(ಹೂವಿನ ಹಾರ,ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ) ರೂ.ಐದು ಸಾವಿರ, ವಧುವಿಗೆ ಪ್ರೋತ್ಸಾಹ ಧನ(ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ) ರೂ ಹತ್ತು ಸಾವಿರ ಹಾಗೂ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ರೂ. ನಲ್ವತ್ತು ಸಾವಿರ ಸೇರಿದಂತೆ ಒಟ್ಟು 55 ಸಾವಿರ ಮೌಲ್ಯದ ಪ್ರೋತ್ಸಾಹಧನವನ್ನು ಪ್ರತೀ ದಂಪತಿಗಳಿಗೆ ವಿತರಿಸಲಾಯಿತು.

ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಉದಯ ಶೇರುಗಾರ್, ಉಪಾಧ್ಯಕ್ಷ ನಾಗೇಶ್, ಕುಂದಾಪುರ ಉಪವಿಭಾಗಾಧಿಕಾರಿ, ಕೊಲ್ಲೂರು ದೇವಳದ ಆಡಳಿತಾಧಿಕಾರಿ ರಶ್ಮಿ ಎಸ್. ಆರ್, ಉಡುಪಿ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಶಾಂತ್ ಕುಮಾರ್ ಶೆಟ್ಟಿ, ಬೈಂದೂರು ತಹಸೀಲ್ದಾರ್ ಪ್ರದೀಪ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಕೊಲ್ಲೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ವೀರೇಶ್ ಮೊದಲಾದವರು ಉಪಸ್ಥಿತರಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ಉಪಾಧಿವಂತ ವೆ.ಮೂ.ಗಜಾನನ ಜೋಯಿಸರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

Click Here

LEAVE A REPLY

Please enter your comment!
Please enter your name here