ನಭದ ಕಡೆಗೊಂದು ನೋಟ ಆಕಾಶ ವೀಕ್ಷಣೆ ಕಾರ್ಯಕ್ರಮ

ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಫೆ.15 ಸಂಜೆ 6 ಗಂಟೆಯಿಂದ ನಡೆದ ನಭದ ಕಡೆಗೊಂದು ನೋಟ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಅತುಲ್ ಭಟ್‌ರವರು ಮಕ್ಕಳಿಗೆ ಆಕಾಶ ಕಾಯಗಳನ್ನು ಪರಿಚಯಿಸುತ್ತ “ಆಕಾಶ ವೀಕ್ಷಣೆ ಹವ್ಯಾಸ ಮಕ್ಕಳಲ್ಲಿ ಖಗೋಳದ ಬಗ್ಗೆ ಕೂತೂಹಲವನ್ನು ಹೆಚ್ಚಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರುತಿ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಂದಾಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಮ ಮೊಗವೀರ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇಲ್ಲಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಿಲ್ಟನ್ ರೋಹಿತ್ ಕ್ರಾಸ್ತಾ ಸಭೆಯಲ್ಲಿ ಉಪಸ್ಥಿತರಿದ್ದರು.
ನಂತರದಲ್ಲಿ ಸಂಪನ್ಮೂಲ ವ್ಯಕ್ತಿ ಅತುಲ್ ಭಟ್‌ರವರು ತಮ್ಮ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳಾದ ದಿನೇಶ ಹೆಬ್ಬಾರ್ ಮತ್ತು ಭೂಮಿಕಾ ಇವರ ಸಹಕಾರದೊಂದಿಗೆ ಮಕ್ಕಳಿಗೆ ದೂರದರ್ಶಕದ ಮೂಲಕ ಚಂದ್ರ, ಗುರು ಮತ್ತು ಅದರ ನಾಲ್ಕು ಉಪಗ್ರಹಗಳನ್ನು ತೋರಿಸಿ ಆಕಾಶದ ವಿವಿಧ ನಕ್ಷತ್ರ ಪುಂಜಗಳು ಮತ್ತು ನಕ್ಷತ್ರಗಳನ್ನು ಗುರುತಿಸುವುದನ್ನು ಮಕ್ಕಳಿಗೆ ಪರಿಚಯಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಸದಸ್ಯರು, ಪೋಷಕರು, ಹಳೆವಿದ್ಯಾರ್ಥಿಗಳು ಮತ್ತು ಸ್ಥಳೀಯ ಖಗೋಳ ಆಸಕ್ತ ಶಿಕ್ಷಕರು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಿಸಿದ ಆನಂದ ಕುಲಾಲ ಪ್ರಸ್ತಾವನೆಗೈದರು. ಅತಿಥಿ ಶಿಕ್ಷಕಿ ಶ್ರೀಮತಿ ಪ್ರಮೀಳಾ ವಂದಿಸಿದರು. ಸಹಶಿಕ್ಷಕಿ ಸಂಧ್ಯಾ ಕೆ. ಕಾರ್ಯಕ್ರಮ ನಿರೂಪಿಸಿದರು.











