ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪರ್ಯಾಯ ಅದಮಾರು ಮಠ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಕಾರದೊಂದಿಗೆ ಧಾರೇಶ್ವರ ಯಕ್ಷ ಬಳಗ ಕಿರಿಮಂಜೇಶ್ವರ ಸಂಯೋಜನೆಯಲ್ಲಿ ೬ನೆಯ ವರ್ಷದ ಯಕ್ಷ ಅಷ್ಟಾಹ ಅ.23ರಿಂದ ಅ.3೦ರವರೆಗೆ ಪ್ರತಿದಿನ ರಾತ್ರಿ 7.3೦ರಿಂದ ಉಡುಪಿ ರಾಜಾಂಗಣದಲ್ಲಿ ನಡೆಯಲಿದೆ.


ಹಿರಿಯ ಕಲಾವಿದ ಬೇಲ್ತೂರು ರಮೇಶ್ ಅವರಿಗೆ ತಲ್ಲೂರ್ ಫ್ಯಾಮಿಲಿ ಪ್ರಶಸ್ತಿ ೨೦೨೧ನ್ನು ಪ್ರದಾನ ಮಾಡಲಾಗುವುದು. ಅ.೩೦ರ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಮಠಾಧಿಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಮಾರುತಿ ಪ್ರತಾಪ, ದ್ರೋಣ ಪ್ರತಾಪ, ಚೂಡಾಮಣಿ, ಚ್ಯವನ, ಶ್ರೀಕೃಷ್ಣ ಗಾರುಡಿ, ನೈಮಿಷಾರಣ್ಯ, ದಂಬೋದ್ಭವ, ಸುದರ್ಶನ ವಿಜಯ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಸುಬ್ರಹ್ಮಣ್ಯ ಧಾರೇಶ್ವರ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರದ ಸೌಕರ್ಯ ಇದೆ. ಕಲಾವಿದರಾಗಿ ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ಚಂದ್ರಕಾಂತ ಮೂಡುಬೆಳ್ಳೆ, ಸುಧೀರ್ ಪೆರ್ಡೂರು, ಗಜಾನನ ಭಂಡಾರಿ ಬೋಳ್ಗೆರೆ, ಶಶಿ ಆಚಾರ್, ಶಿವಾನಂದ ಕೋಟ, ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಅಶೋಕ ಭಟ್ ಸಿದ್ದಾಪುರ, ಶಂಕರ ಹೆಗಡೆ ನೀಲ್ಕೋಡು, ಮುಗ್ವ ಗಣೇಶ ನಾಯ್ಕ್, ಸುಧೀರ ಉಪ್ಪೂರು, ನಾಗೇಶ್ ಕುಳಿಮನೆ, ಲೋಕೇಶ ಗುಣವಂತೆ, ಕಾರ್ತಿಕ ಕಣ್ಣಿ, ಹಾಸ್ಯಪಾತ್ರದಲ್ಲಿ ಶ್ರೀಧರ ಭಟ್ ಕಾಸರಕೋಡ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.











