ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಸೀತಾ ನದಿತಟದಲ್ಲಿ ಉಡುಪಿ ಎಡಿಸಿ ಮಮತಾ ದೇವಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ರಾಯಲ್ ಹಾಗೂ ಕುಂದಾಪುರ ಎ.ಸಿ ರಶ್ಮಿ ಕಾಯಾಕಿಂಗ್ ಮೂಲಕ ಸಂವಿಧಾನದ ಜಾಗೃತಿ ಮೊಳಗಿಸಿದರು.
75 ಎಂದು ವಿವಿಧ ರೀತಿಯ ವಿನ್ಯಾಸಗೊಳಿಸಿದ ದೋಣಯ ಮೂಲಕ ವಿಹರಿಸಿ ಅಲ್ಲಿ ಅಳವಡಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಭಾರ್ಚನೆಗೈದು ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಎ.ಸಿ ರಶ್ಮಿ ಮಾತನಾಡಿ ಸಾಲಿಗ್ರಾಮ ಕಾಯಾಕಿಂಗ್ ಪಾಯಿಂಟ್ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯಗಳು ,ಜಾಗೃತಿ ಆಂದೋಲನಗಳು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುವಂತೆ ನಡೆಸುವ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ರಾಜ್ಯದಲ್ಲೆ ಮೊಟ್ಟ ಮೊದಲ ಬಾರಿಗೆ ನದಿಯ ಮೂಲಕ ಸಂವಿಧಾನ ಜಾಗೃತಿ ಮೊಳಗಿಸಿದ ಬಗ್ಗೆ ಅಧಿಕಾರಿವರ್ಗ ಹರ್ಷ ವ್ಯಕ್ತಪಡಿಸಿತು.
ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖಾಧಿಕಾರಿ ಕುಮಾರ್, ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ,, ಪ್ರಪೇಶನರಿ ಐಪಿಎಸ್ ಅಧಿಕಾರಿ ಹರ್ಷಪ್ರೀಯಂವಧಾ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಅನಿತಾ ಮದ್ಲೂರ್, ಕಾಯಾಕಿಂಗ್ ಮುಖ್ಯಸ್ಥರಾದ ಮಿಥುನ್ ಮೆಂಡನ್, ಲೋಕೇಶ್ ಮೆಂಡನ್, ವಿನಯ್ ಬಂಗೇರ, ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್ ಮತ್ತಿತರರು ಇದ್ದರು.











