ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:ಮಾತೃಭೂಮಿ ಸೇವಾ ಟ್ರಸ್ಟ್ (ರಿ) ತುಮಕೂರು ಇವರ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ಸೇವೆ ಗೈದವರಿಗೆ ಕೊಡ ಮಾಡುವ ಗೌರವ ಪ್ರಶಸ್ತಿಯಲ್ಲಿ ಬಸ್ರೂರಿನ ಪ್ರದೀಪ್ ಕುಮಾರ್ ಇವರಿಗೆ “ರಾಜ್ಯ ಮಟ್ಟದ ಕರುನಾಡ ಕಣ್ಮಣಿ ” ಪ್ರಶಸ್ತಿಗೆ ಆಯ್ಕೆ ಯಾಗಿರುತ್ತಾರೆ.
ಕ್ರೀಡೆ, ಸಾಂಸ್ಕ್ರತಿಕ,ಶೈಕ್ಷಣೀಕ, ಸಾರ್ವಜನಿಕ ಸೇವಾ ವಲಯ,ಧಾರ್ಮಿಕ ಸೇವೆಯೊಂದಿಗೆ ಸ್ವತಂತ್ರ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡು ಇವರ ಶಾಸನ ಶೋಧ ಕಾರ್ಯದ ಒಂದು ಶಾಸನವು ಹಂಪಿ ವಿಶ್ವವಿದ್ಯಾಲಯದ ಶಾಸನ ಪ್ರಸಾರಾಂಗ ವಿಭಾಗದಲ್ಲಿ ವರದಿಯಾಗಿದೆ.ಇದರೊಂದಿಗೆ ಅನೇಕ ವೀರಗಲ್ಲು,ಶಾಸನ ಕಲ್ಲು,ಪುರಾತನ ದೇವರ ವಿಗ್ರಹವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನೇಕ ಸಂಘ ಸಂಸ್ಥೆಯಲ್ಲಿ ಸೇವೆಯಲ್ಲಿ ಇವರು ಗುರುತಿಸಿಕೊಂಡು ಇವರ ಸೇವೆಯನ್ನು ಮನಗಂಡು ಸಂಸ್ಥೆ ನವೆಂಬರ್ 21 ರಂದು ತುಮಕೂರು ನಲ್ಲಿ ಪ್ರಶಸ್ತಿ ನೀಡಲಿದೆ.
ಇವರು ಹಟ್ಟಿಕುದ್ರು ಗುಜ್ಜಾಡಿ ಮನೆ ಪದ್ಮನಾಭ ಪೂಜಾರಿ ಹಾಗೂ ಉಗ್ರಾಣಿ ಮನೆ ಗಿರಿಜಾ ಪೂಜಾರಿ ದಂಪತಿಯ ದ್ವಿತೀಯ ಪುತ್ರರಾಗಿರುತ್ತಾರೆ.











