ಬೈಂದೂರು :ಡಿಸಿ ಮನ್ನಾ ಭೂಮಿಗೆ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಡಿಸಿ ಎಸ್ಪಿ ಭೇಟಿ – ಸತ್ಯಾಗ್ರಹ ವಾಪಾಸ್

0
232

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಕಳೆದ ನಾಲ್ಕು ದಿನಗಳಿಂದ ದಲಿತ ಸಂಘಟನೆ ನಡೆಸುತ್ತಿದ್ದ ಡಿಸಿ ಮನ್ನಾ ಭೂಮಿಗಾಗಿ ಉಪವಾಸ ಸತ್ಯಾಗ್ರಹ ಗುರುವಾರ ಸಂಜೆ ಹಿಂಪಡೆದುಕೊಳ್ಳಲಾಗಿದೆ ಎಂದು ಸತ್ಯಾಗ್ರಹ ನಿರತ ದಲಿತ ಮುಖಂಡರು ತಿಳಿಸಿದ್ದಾರೆ

Click Here

ಗುರುವಾರ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಎಸ್ಪಿ ಅರುಣ್ ಕುಮಾರ್ ಸ್ಥಳಕ್ಕೆ ಭೇಟಿ ದಲಿತ ಮುಖಂಡರೊಡನೆ ಮಾತುಕತೆ ಮಾಡಿದ್ದು, ದಲಿತರ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸತ್ಯಾಗ್ರಹ ವಾಪಾಸ್ ಪಡೆಯಲಾಗಿದೆ ಎಂದು ದಲುತ ಮುಖಂಡರು ತಿಳಿಸಿದ್ದಾರೆ.

ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿದೆ. ಒಂದೊಮ್ಮೆ ಬೇಡಿಕೆಗಳು ಈಡೇರದೇ ಇದ್ದರೆ ಶಿರೂರಿನಿಂದ ಜಿಲ್ಲಾಧಿಕಾರಿಗಳ ಕಚೇರಿ ತನಕ ತಮಟೆ ಬಾರಿಸಿಕೊಂಡು ಮೆರವಣಿಗೆ ಮೂಲಕ ಹೋಗಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ದಲಿತ ಮುಖಂಡ ವಕೀಲ, ಮಂಜುನಾಥ ಗಿಳಿಯಾರ್, ರಾಘವೇಂದ್ರ ಶಿರೂರು, ರಮೇಶ್ ಶಿರೂರು, ಮಾಧವ, ಸುಬ್ರಹ್ಮಣ್ಯ ಬಿಜೂರು ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here