ಕುಂದಾಪುರ :ಅಪ್ಪನ ತಿಥಿಯಂದೆ ಮಗ ಟಿಪ್ಪರ್ ನಡಿಗೆ ಸಿಲುಕಿ ಸಾವು

0
339

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತಂದೆಯ ತಿಥಿಯ ದಿನವೇ ಇದ್ದ ಒಬ್ಬನೇ ಮಗ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶುಕ್ರವಾರ ಕುಂದಾಪುರ ತಾಲೂಕಿನ ಕಾಳಾವರದಲ್ಲಿ ನಡೆದಿದೆ.

ಕಾಳಾವರ ದಿ.ರಾಮಕೃಷ್ಣ ಆಚಾರ್ಯ ಅವರ ಏಕ ಮಾತ್ರ ಪುತ್ರ ರಾಘವೇಂದ್ರ ಆಚಾರ್ಯ ಎಂಬುವರೇ ತಂದೆಯ ಸಾವಿನ ದಿನವೇ ಇಹಲೋಕ ತ್ಯಜಿಸಿದ ನತದೃಷ್ಟ.

Click Here

ಮರದ ಕೆಲಸ ಕಬ್ಬಿಣ ಕೆಲಸ ಹಾಗೂ ಇಂಜಿನ್‌ ರಿಪೇರಿ ಮೋಟಾರ್ ರಿಪೇರಿ ಕೆಲಸದ ಬಿಡುವಿನ ಸಮಯದಲ್ಲಿ ಮಾಡುತ್ತಿದ್ದ ರಾಮಕೃಷ್ಣ ಆಚಾರ್ ಅವರು ಮಾರ್ಚ್ 1ರಂದು ಆಕಸ್ಮಿಕವಾಗಿ ಮರಣ ಹೊಂದಿದ್ದರು. ಇಂದು ಅವರ ತಿಥಿಯ ದಿನವಾಗಿತ್ತು. ರಾಮಕೃಷ್ಣ ಆಚಾರ್ ಅವರ ಒಬ್ಬನೇ ಮಗ ರಾಘವೇಂದ್ರ ಆಚಾರ್ ಕೋಟದಲ್ಲಿ ಗ್ಲಾಸ್ ಅಂಡ್ ಪ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಇಂದು ಶುಕ್ರವಾರ ತನ್ನ ‌ ತಂದೆಯ ತಿಥಿ ಕಾರ್ಯ ಮುಗಿಸಿದ ಬಳಿಕ ಮನೆಯ ಕೆಲಸಕ್ಕೆಂದು ಒಂದು ಲೋಡ್ ಮರಳು ತರಿಸಿದ್ದರು. ಈ ಸಂದರ್ಭ ಮರಳು ತುಂಬಿದ ಟಿಪ್ಪರ್ ರಿವರ್ಸ್ ಬರುತ್ತಿದ್ದ ವೇಳೆ ಮನೆಯ ಗೇಟಿನ ಪಕ್ಕದಲ್ಲಿ ನಿಂತಿದ್ದ ರಾಘವೇಂದ್ರ ಆಚಾರ್ಯ ಅವರಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು ಭೇಟಿನ ಪಿಲ್ಲರ್ ಮತ್ತು ಟಿಪ್ಪರ್ ನ ಹಿಂದುಗಡೆಯ ಬಾಡಿಗೆ ನಡುವೆ ಸಿಕ್ಕಿ ತಲೆ ಒಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ರಾಘವೇಂದ್ರ ಅವರ ಸಾವಿನಿಂದಾಗಿ ಮನೆ ಈಗ ಶೋಕದಲ್ಲಿ ಮುಳುಗಿದೆ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿಯ ಗೋಳು ಆಕ್ರಂದನ ಮುಗಿಲು ಮುಟ್ಟಿದೆ ಗ್ಲಾಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಆಚಾರ್ಯ ಕುಂದಾಪುರದ ಸಾಧನ ಕಲಸಂಗಮ ಶಾಲೆಯಲ್ಲಿ ಹಿಂದುಸ್ತಾನಿ ಸಂಗೀತ ಅಭ್ಯಾಸ ಮಾಡುತ್ತಿದ್ದರು ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದ ರಾಘವೇಂದ್ರ ಆಚಾರ್ಯ ಅಗಲಿದ್ದಾರೆ ಕುಂದಾಪುರ ಗ್ರಾಮಾಂತರ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Click Here

LEAVE A REPLY

Please enter your comment!
Please enter your name here