ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದಿಂದ ಐತಿಹಾಸಿಕ ಸಾಧಕರಿಗೆ ಅಭಿನಂದನೆ

0
628

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಕೋವಿಡ್-19 ಸಾಂಕ್ರಾಮಿಕ ಅವದಿಯಲ್ಲಿ ನೂರು ಕೋಟಿ ಲಸಿಕೆ ನೀಡಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ಭಾರತ ಶತಕೋಟಿ ಸಂಭ್ರಮದಲ್ಲಿದೆ. ದೇಶ ಶತಕೋಟಿ ಲಸಿಕಾಕರಣ ಗುರಿ ಸಾಧಿಸುವಲ್ಲಿ ಮುಖ್ಯ ಪಾತ್ರ ವಹಿಸಿದವರು ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು. ಈ ಹಿನ್ನೆಲೆಯಲ್ಲಿ ಕುಂಭಾಶಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ವೈದ್ಯಾಧಿಕಾರಿ ಡಾ. ಶೋಭಾ ಹಾಗೂ ಅವರ ತಂಡವನ್ನು ಅವರ ಸೇವೆಯನ್ನು ಗುರುತಿಸಿ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್ ಹೂ ಕುಂಡಗಳ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಸದಸ್ಯರಾದ ಕಲ್ಷನಾ ಭಾಸ್ಕರ್ ,ಆಶಾಲತಾ ಶೆಟ್ಟಿ,ಚಂದ್ರಿಕಾ ಧನ್ಯ, ಅಮೃತಾ ಬನವಾಲಿಕರ್, ಸುಮಶ್ರೀ ಧನ್ಯ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ರಾಜೇಂದ್ರ, ಲ್ಯಾಬ್ ಟೆಕ್ನೀಶನ್ ದಿವ್ಯಾ, ನರ್ಸ್ ಗಿರಿಜಾ, ಆಶಾ ವೈಲೆಟ್ ಬರೆಟ್ಟೋ ಹಾಗೂ ದಿವ್ಯ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here