ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಪಟು ಕೋಟದ ದಿನೇಶ್ ಗಾಣಿಗರಿಗೆ ಹುಟ್ಟೂರ ಸ್ವಾಗತ

0
435

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಪಟು ಕೋಟದ ದಿನೇಶ್ ಗಾಣಿಗ ಸೋಮವಾರ ಹುಟ್ಟೂರಿಗೆ ಆಗಮಿಸಿದರು.

Click Here

ಇತ್ತೀಚಿಗೆ ಥೈಲ್ಯಾಂಡ್ ರಾಜಬುಟದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಮೂರು ಪದಕ ವಿಜೇತರಾಗಿದ್ದರು.
ಹುಟ್ಟೂರು ಉಡುಪಿ ಜಿಲ್ಲೆಯ ಕೋಟ ಕ್ಕೆ ಆಗಮಿಸಿ ಶ್ರೀ ಕ್ಷೇತ್ರ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಭವ್ಯ ಸ್ವಾಗತ ಕೋರಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪರವಾಗಿ ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ಶಾಲು ಹೊದಿಸಿ ಗೌರವಿಸಿದರು.
ಕೋಟ ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕೋಟ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ತಾರಾನಾಥ್ ಪೂಜಾರಿ, ಸಂದೀಪ್ ಕದ್ರಿಕಟ್ಟು, ಪಂಚವರ್ಣದ ಗಿರೀಶ್ ಆಚಾರ್, ನರಸಿಂಹ ಗಾಣಿಗ,ಕೇಶವ ಆಚಾರ್, ಸಂತೋಷ್ ಸಾಲಿಯಾನ್, ಕಾರು ಚಾಲಕ ಸಂಘದ ಹಿರಿಯರಾದ ಶಿವರಾಮ್ ಗಾಣಿಗ, ಕೋಟ ಶನೀಶ್ವರ ದೇಗುಲದ ಸಂತೋಷ್ ಕೋಟ, ಕೋಟ ಅಮೃತೇಶ್ವರಿ ದೇಗುಲದ ಅರ್ಚಕರಾದ ಸುಧಾಕರ್ ಜೋಗಿ, ಸಿಬ್ಬಂದಿ ಬಾಬಣ್ಣ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here