ಕುಂದಾಪುರ ಮಿರರ್ ಸುದ್ದಿ…

ಕೋಟ: ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹರ್ತಟ್ಟು, ಗಿಳಿಯಾರು ಕೋಟ ಇದರ ಪ್ರಥಮ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮ ಗುರುವಾರ ಸಂಪನ್ನಗೊಂಡಿತು. ಪ್ರಥಮ ವರ್ಧಂತಿ ಉತ್ಸವದ ಅಂಗವಾಗಿ ವೇ.ಮೂ.ಸುಧೀರ್ ಐತಾಳ್ ನೇತೃತ್ವದಲ್ಲಿ ತಂತ್ರಿಗಳಾದ ಮಣಿಕಲ್ ಮಂಜುನಾಥ ಉಡುಪ ಪೌರೋಹಿತ್ಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ನವಕ ಪ್ರಧಾನ ದ್ರವ್ಯ ಕಲಶ ಕಲಾತತ್ವ ಹೋಮ ಕಲಶಾಭಿಷೇಕ, ಮಹಾಪೂಜೆ,ಅಪರಾಹ್ನ ಸಾರ್ವಜನಿಕ ಅನ್ನಸಂತರ್ಪಣೆ
ಸಂಜೆ ರಂಗಪೂಜೆ, ಪಂಚವರ್ಣ ಮಹಿಳಾ ಮಂಡಳ ಭಜನಾ ತಂಡ ಕೋಟ ಇವರಿಂದ ಭಜನಾ ಕಾರ್ಯಕ್ರಮಗಳು ಜರಗಿದವು.
ಧಾರ್ಮಿಕ ವಿಧಿವಿಧಾನದಲ್ಲಿ ದೇಗುಲದ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ ದಂಪತಿಗಳು,ಜಿ.ಗೋಪಾಲಕೃಷ್ಣ ಮಯ್ಯ ದಂಪತಿಗಳು ಭಾಗಿಯಾದರು.
ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಹರೀಷ್ ದೇವಾಡಿಗ, ,ಸ್ಥಳೀಯರಾದ ವಾಸುದೇವ ಮಯ್ಯ,ಚಂದ್ರಿಕ ಭಟ್ ಸಿದ್ಧ(ಶ್ರೀಧರ) ದೇವಾಡಿಗ,ತಿಮ್ಮ ಕಾಂಚನ್,ಚಂದ್ರ ಹಾಡಿಕೆರೆ,ಬಾಬು ಶೆಟ್ಟಿ,ನಾಗರಾಜ್ ಗಾಣಿಗ,ಗಿರೀಶ್ ದೇವಾಡಿಗ,ದೇಗುಲದ ಸೇವಾ ಸಮಿತಿಯ ಶೇಖರ್ ದೇವಾಡಿಗ,ಪ್ರದೀಪ ದೇವಾಡಿಗ ,ಕೀರ್ತೀಶ್ ಪೂಜಾರಿ,ದಿನೇಶ್ ದೇವಾಡಿಗ,ಪ್ರಶಾಂತ್ ದೇವಾಡಿಗ,ಶಾಂತಾ ಆಚಾರ್,ಗುಲಾಬಿ ಪೂಜಾರಿ,ಜಗದೀಶ್ ದೇವಾಡಿಗ,ದಿನೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.











