ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಯಾರಿಗೆ ಮನೆ ಇಲ್ಲವೋ ಅವರಿಗೆ ಮನೆ ಕಟ್ಟಿಕೊಡುವಂತಹದ್ದು ಸರಕಾರದ ಜವಾಬ್ದಾರಿ. ಈ ಬಗ್ಗೆ ನಮ್ಮ ಸಂವಿಧಾನವೇ ಸ್ಪಷ್ಟವಾಗಿ ತಿಳಿಸಿದೆ ಎಂದು ಉದ್ಯಮಿ ಡಾ. ಎಚ್ಎಸ್ ಶೆಟ್ಟಿ ಹೇಳಿದರು.
ಅವರು ಕುಂದಾಪುರ ತಾಲೂಕು, ಬಿದ್ಕಲ್ ಕಟ್ಟೆ ಸಮೀಪದ ಜನ್ನಾಡಿ ಕೊರಗರ ಕಾಲೋನಿಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸೊಸೈಟಿ (ರಿ) ಬೆಂಗಳೂರು ಇವರ ವತಿಯಿಂದ ಕೊರಗರ ಕಾಲೋನಿಯಲ್ಲಿ ನಿರ್ಮಿಸಲಿರುವ14 ಮನೆಗಳ ಭೂಮಿ ಪೂಜೆ ಮತ್ತೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ ಅಯೋಧ್ಯೆಗೆ ತೆರಳಿದ ಸಂದರ್ಭ ಪೇಜಾವರ ಶ್ರೀಗಳು ರಜತ ಕಳಶವನ್ನು ನೀಡಿ ಗೌರವಿಸಿದ್ದರು. ರಾಮಜನ್ಮ ಭೂಮಿಯಲ್ಲಿ ಕುಳಿತಿದ್ದಾಗ ರಾಮ ರಾಜ್ಯದ ಕಲ್ಪನೆಯ ಕುರಿತು ಸ್ವಾಮೀಜಿಯವರು ನೀಡಿದ ಪತ್ರವನ್ನು ಓದಿ ಈ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದೇನೆ ಎಂದರು. ಶಿಲಾನ್ಯಾಸ ನೇರವೇರಿಸಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರು, ಅಯೋಧ್ಯೆಯಲ್ಲಿ ರಾಮನ ಭವ್ಯ ಮಂದಿರವನ್ನು ನಿರ್ಮಿಸಲಾಗಿದೆ ಹಲವು ದಿನಗಳ ಕಾರ್ಯ ಅಲ್ಲಿ ವಿವಿಧ ಕಾರ್ಯಕ್ರಮಗಳನ್ನ ಕೂಡ ನಡೆಸಿದ್ದೇವೆ. ಆಗ ರಾಮ ನನ್ನಲ್ಲಿ, ನನಗೆ ಏನೋ ಮನೆಯಾಗಿದೆ ಆದರೆ ನಮ್ಮ ದೇಶದಲ್ಲಿ ಇನ್ನೂ ಸಾಕಷ್ಟು ಜನ ವಸತಿ ಇಲ್ಲದೆ ಪರದಾಡುತ್ತಿದ್ದಾರೆ ಅಂತವರಿಗೂ ಕೂಡ ಮನೆಯಾಗಬೇಕಾದ ಅಗತ್ಯತೆ ಇದೆ ಎಂದಾದ ಆಯ್ತು, ನಾನು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಶ್ರೀರಾಮ ನಿಗೆ ತಿಳಿಸಿದೆ. ರಾಮದೇವರ ಅನಿಸಿಕೆಯನ್ನ ನನ್ನ ಸ್ನೇಹಿತ ಮಿತ್ರರಲ್ಲಿ ತಿಳಿಸಿದಾಗ ನನ್ನ ಯೋಜನೆಗೆ ಸಹಕಾರ ನೀಡಿದ್ದಾರೆ ಅವರಿಗೆ ಶ್ರೀ ರಾಮನ ಅನುಗ್ರಹವಾಗಲಿ ಎಂದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಕೇಂದ್ರದ ಮುರಳಿ ಕಡೆಕಾರ್ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಪೇಜಾವರ ಶ್ರೀಗಳನ್ನು ಪೂರ್ಣಕುಂಭದ ಮೂಲಕ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಯಕ್ಷ ಕಲಾರಂಗದ ಕಾರ್ಯದರ್ಶಿ ಮುರುಳಿ ಕಡೆಕಾರ್, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸೊಸೈಟಿಯ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.











