ಕುಂದಾಪುರ ಮಿರರ್ ಸುದ್ದಿ…
ಕೋಟ: ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ವನಿತಾ ಉಪಾಧ್ಯರವರ ಮನೆಯಂಗಳದಲ್ಲಿ ಶುಕ್ರವಾರ ಜರಗಿತು.
ಕಾರ್ಯಕ್ರಮವನ್ನು ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಮಂಜುನಾಥ ಉಪಾಧ್ಯ ಉದ್ಘಾಟಿಸಿ ಮಾತನಾಡಿ ಪರಕೀಯರ ದಾಳಿಯಿಂದ ನಮ್ಮ ಸಂಸ್ಕೃತಿ ಸ್ವಾಭಿಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ, ಸ್ವಾತಂತ್ರ್ಯ ಪೂರ್ವದಲ್ಲೆ ಭಾರತೀಯರ ಮೇಲೆ ಅದರಲ್ಲೂ ಇಲ್ಲಿನ ಮಹಿಳೆಯ ಸ್ವಾತಂತ್ರದ ಮೇಲೆ ಪರಿಣಾಮ ,ಅಲ್ಲದೆ ನಾರಿಶಕ್ತಿ ವಿಜೃಂಭಿಸುವ ಕಾಲ ಇಂದು ಕಾಣುತ್ತಿದ್ದೇವೆ ಅಸಮಾನತೆ ತೊಡೆದು ಹಾಕಿ ಸ್ವಾವಲಂಬಿ ಬದುಕಿಗೆ ಮಹಿಳೆ ಮುನ್ನುಡಿ ಬರೆಯುತ್ತಿದ್ದಾಳೆ. ಪುರುಷ ಪ್ರದಾನವಾದ ಈ ಸಮಾಜದಲ್ಲಿ ಮಹಿಳೆ ಕೂಡಾ ಸಮಾನವಾಗಿ ನಿಂತು ವಿವಿಧ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾಳೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ.
ಸಭೆಯ ಅಧ್ಯಕ್ಷತೆಯನ್ನು ವಿಪ್ರ ಮಹಿಳಾಬಳಗದ ಅಧ್ಯಕ್ಷೆ ಗಾಯತ್ರಿ ಹೊಳ್ಳ ವಹಿಸಿದ್ದರು.
ಮಣೂರು ಮಹಾಲಕ್ಷ್ಮೀ ಉರಾಳ ಇವರನ್ನು ವಿಪ್ರ ಮಹಿಳಾ ಬಳಗದ ಭಾಗ್ಯ ವಾದಿರಾಜ್ ಸನ್ಮಾನಿಸಿದರು.
ಮುಖ್ಯ ಅತಿಥಿಯಾಗಿ ತೆಕ್ಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಇದರ ಆಂಗ್ಲ ಮಾಧ್ಯಮ ಉಪನ್ಯಾಸಕಿ ಶಾರದಾ ಹೊಳ್ಳ ಸ್ವಾವಲಂಬಿ ಬದುಕಿನ ಬಗ್ಗೆ ವಿವರವಾಗಿ ತೀಳಿಸಿದರು.
ಶುಭಾಶಂಸನೆ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಮಂಜುನಾಥ ಉಪಾಧ್ಯ ಗೈದರು.
ವರದಿಯನ್ನು ಸದಸ್ಯೆ ಸ್ಮೀತಾರಾಣಿ ವಾಚಿಸಿದರು. ವಿಪ್ರ ಮಹಿಳಾ ಬಳಗದ ಮಾಜಿ ಅಧ್ಯಕ್ಷೆ ಜ್ಞಾನವಿ ಹೇರ್ಳೆ ಸ್ವಾಗತಿಸಿದರು. ಅತಿಥಿಗಳನ್ನು ಭಾರತಿ ಮಯ್ಯ ಪರಿಚಯಿಸಿದರು. ನರ್ಮದಾ ಹೇರ್ಳೆ ಸನ್ಮಾನಪತ್ರ ವಾಚಿಸಿದರು.
ಕಾರ್ಯಕ್ರಮವನ್ನು ವಿಪ್ರ ಮಹಿಳಾ ಬಳಗದ ಸದಸ್ಯೆ ಸುಮನ ಹೇರ್ಳೇ ನಿರೂಪಿಸಿದರು. ಸದಸ್ಯೆ ಸುಜಾತ ಬಾಯರಿ ವಂದಿಸಿದರು. ಸಂಚಾಲಕಿ ವನಿತಾ ಉಪಾಧ್ಯಾ ಕಾರ್ಯಕ್ರಮ ಸಂಯೋಜಿಸಿದರು.











