ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಾಲಿಗ್ರಾಮ ಇದರ 2021-26ರ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಎಲ್ಲಾ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಸಂಘದ ಪದಾಧಿಕಾರಿಗಳ ಚುನಾವಣೆ 24ರಂದು ಜರಗಿದ್ದು ಮುಂದಿನ ಐದು ವರ್ಷಗಳ ಅವಧಿಗೆ ಆನಂದ ಸಿ ಕುಂದರ್ ಅವರು ಮೂರನೇ ಬಾರಿಗೆ ಅಧ್ಯಕ್ಷರಾಗಿಯೂ ಸಂಜೀವ ಜಿ. ಉಪಾಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಗೆ ಸಾಮಾನ್ಯ ಕ್ಷೇತ್ರದಿಂದ ಆನಂದ ಸಿ ಕುಂದರ್, ಡಾ.ಕೆ.ಕೃಷ್ಣ ಕಾಂಚನ್, ಮಂಜುನಾಥ, ಎಚ್ ಮಧುಸೂಧನ ಐತಾಳ್, ವಸಂತ ಶೆಟ್ಟಿ ಮತ್ತು ವೈ ಕೃಷ್ಣಮೂರ್ತಿ ಐತಾಳ್, ಪರಿಶಿಷ್ಟ ಜಾತಿ ವರ್ಗ ಮೀಸಲು ಕ್ಷೇತ್ರದಿಂದ ಸಂಜೀವ ಜಿ. ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಶಂಕರ ಬಂಗೇರ ಮತ್ತು ಡಾ. ಸತೀಶ ಪೂಜಾರಿ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಶಾಂತಾ ಭಟ್ ಮತ್ತು ನಾಗರತ್ನ ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ
ಕೆ. ಎನ್. ಜಗದೀಶ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಡುಪಿ ಇವರು ಚುನಾವಣಾಧಿಕಾರಿಯಾಗಿ ಚುನಾವಣೆಯನ್ನು ನಡೆಸಿಕೊಟ್ಟರು
ಅಧ್ಯಕ್ಷರು ಸಂಘದ ಆಡಳಿತ ಮಂಡಳಿ ಚುನಾವಣೆಯನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ಸದಸ್ಯರುಗಳನ್ನು ಶ್ಲಾಘಿಸಿದರು.ಅದೇ ರೀತಿ ತನ್ನನ್ನು ಸತತವಾಗಿ ಮೂರನೇ ಬಾರಿ ಗುರುತೆರನಾದ ಜವಾಬ್ದಾರಿಯುಳ್ಳ ಅಧ್ಯಕ್ಷ ಸ್ಥಾನಕ್ಕೆ ಆವಿರೋಧವಾಗಿ ಒಮ್ಮತದಿಂದ ಚುನಾಯಿಸಿದ ಆಡಳಿತ ಮಂಡಳಿ ನಿರ್ದೇಶಕರುಗಳನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಸಂಘದ ಬೆಳವಣಿಗೆಗೆ ಎಂದಿನಂತೆ ಸಹಕರಿಸುವರೆ ಕೋರಿದರು. ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ.ಎಸ್.ಸೋಮಯಾಜಿ ಮತ್ತು ಸಿಬಂದಿಗಳು ಉಪಸ್ಥಿತರಿದ್ದರು.











