ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭೀಕರ ಅಪಘಾತ : ಮೂವರು ಗಂಭೀರ

0
1780

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ಕುಂದಾಪುರದ ಕೆ. ಎಸ್. ಆರ್. ಟಿ. ಸಿ. ಡಿಪೋ ಎದುರುಗಡೆ ನಡೆದಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಕೇರಳ ರಾಜ್ಯದ ಪಾಂಡಿಚೇರಿ ಮಾಹಿತಿ ಎಂಬಲ್ಲಿಗೆ ಹಿಂತಿರುಗುತ್ತಿದ್ದ ಮೂವರು ಭಕ್ತರು ಪ್ರಯಾಣಿಸುತ್ತಿದ್ದ ಟೊಯೋಟೊ ಇನ್ನೋವಾ ಕಾರು ಅಪಘಾತಗೀಡಾಗಿದೆ.

Click Here

ಕುಂದಾಪುರ ಉಡುಪಿ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಸಮೀಪದ ಕೆ. ಎಸ್. ಆರ್. ಟಿ. ಸಿ. ಡಿಪೋ ಎದುರುಗಡೆ ಫ್ಲೈ ಓವರ್ ಮೇಲೆ ಚಲಿಸುತ್ತಿದ್ದ ಕಾರು ಏಕಾ ಏಕೀ ಸರ್ವಿಸ್ ರಸ್ತೆ ಮತ್ತು ಹೆದ್ದಾರಿ ನಡುವಿನ ಡಿವೈಡೆರ್ ಗೆ ಡಿಕ್ಕಿ ಹೊಡೆದಿದೆ ಅಪಘಾತದ ತೀವ್ರತೆಗೆ ಡಿಕ್ಕಿ ಹೊಡೆದ ಫಾರ್ಚುನರ್ ಇನ್ನೋವಾ ಕಾರು ಕಬ್ಬಿಣದ ಗ್ರಿಲ್ ಗಳನ್ನು ಮುರಿದು ಸರ್ವಿಸ್ ರಸ್ತೆ ಮೇಲೆ ತಲೆಕೆಳಗಾಗಿ ಬಿದ್ದಿದೆ ಸಂಪೂರ್ಣ ನುಚ್ಚು ನೂರಾಗಿರುವ ಇನ್ನೋವಾ ಕಾರಿನಲ್ಲಿದ್ದ ಮೂವರ ಪೈಕಿ ಒಬ್ಬರು ಜೀವನ್ಮರಣ ಸ್ಥಿತಿಯಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

ಉಳಿದ ಇಬ್ಬರು ಗಂಭೀರ ಗಾಯಗೊಂಡಿದ್ದು ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತದ ಸಂದರ್ಭ ಸರ್ವಿಸ್ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿ ಹೋಗಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಸರ್ವಿಸ್ ರಸ್ತೆಯಲ್ಲಿ ಮಗುಚಿ ಬಿದ್ದ ಕಾರಿನಿಂದಾಗಿ ಸಂಚಾರ ಸಮಸ್ಯೆ ಉಂಟಾಗಿದ್ದು ಸ್ಥಳೀಯ ಸಾರ್ವಜನಿಕರು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಕೊಟ್ಟರು.

Click Here

LEAVE A REPLY

Please enter your comment!
Please enter your name here