ಕೋಟ :ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಜೀವನ ಯಶೋಗಾಧೆ ವಿಶೇಷವಾದದ್ದು- ರಾಘವೇಂದ್ರ ಮಯ್ಯ

0
295

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಜೀವನ ಯಶೋಗಾಧೆ ವಿಶೇಷವಾದದ್ದು ಅವರ ಅಗಲುವಿಕೆ ಯಕ್ಷಲೋಕ ಶೋಕಸಾಗರದಲ್ಲಿ ಮುಳುಗುವಂತ್ತಾಗಿದೆ ಎಂದು ಕೋಟ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ಹೇಳಿದರು.

ಅವರು ಕೋಟ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಪಡುಕರೆ, ಕೋಟ ಪಂಚವರ್ಣ ಯುವಕ ಮಂಡಲ ,ಮಹಿಳಾ ಮಂಡಲದ ಆಶ್ರಯದಲ್ಲಿ ಇತ್ತೀಚಿಗೆ ಅಗಲಿದ ಯಕ್ಷಲೋಕದ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ಬಡಗುತಿಟ್ಟಿನ ಹೆಚ್ಚಿನ ಯಕ್ಷ ಕಲಾವಿದರಿಗೆ ಈ ಕೋಟ ತವರು ಮನೆಯ ರೀತಿಯಲ್ಲಿ ಸೃಷ್ಠಿಸಿಕೊಂಡಿದ್ದಾರೆ.ಅದರಲ್ಲಿ ಚಿಟ್ಟಾಣಿ, ಧಾರೇಶ್ವರರು ಮೊದಲಿಗರಾಗಿದ್ದಾರೆ. ಯಕ್ಷಲೋಕದಲ್ಲಿ ಸಣ್ಣ ರೀತಿಯ ಕಾರ್ಯನಿರ್ವಹಿಸಿ ಬಹು ಎತ್ತರಕ್ಕೆ ಬೆಳದ ಕಲಾವಿದರಿದ್ದರೆ ಅದು ಧಾರೇಶ್ವರಿಗೆ ಸಲ್ಲಬೇಕಾಗಿದೆ ನನ್ನ ಹಾಗೂ ಅವರ ನಡುವಿನ ಸಂಬಂಧಗಳನ್ನು ನುಡಿನಮನದಲ್ಲಿ ತೆರೆದಿಟ್ಟರು.

Click Here

ಇದೇ ವೇಳೆ ಸುಬ್ರಹ್ಮಣ್ಯ ಧಾರೇಶ್ವರ ಭಾವಚಿತ್ರಕ್ಕೆ ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ಪುಷ್ಭಾರ್ಚನೆಗೈದು ನಮ್ಮಿ ಪರಿಸರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿ ಅಮೃತೇಶ್ವರಿ ಮೇಳದಿಂದ ಕಲಾಕ್ಷೇತ್ರ ಆರಂಭಿಸಿಕೊಂಡವರಲ್ಲಿ ಧಾರೇಶ್ವರರು ಒಬ್ಬರು, ಅಂತಹ ಮಹಾನ್ ಕಲಾವಿದನನ್ನು ಕಳೆದುಕೊಂಡಿದ್ದು ಕಲಾಕ್ಷೇತ್ರ ಬಡವಾಗಿದೆ. ಯಕ್ಷಕಲಾಕ್ಷೇತ್ರಕ್ಕೆ ಧಾರೇಶ್ವರರ ಕೊಡುಗೆ ಅನನ್ಯವಾದದ್ದು ಎಂದರು.

ಸಭೆಯಲ್ಲಿ ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ಸಂಯೋಜಕ ಸಂತೋಷ್ ಕುಮಾರ್ ಕೋಟ, ಕೋಟ ಅಮೃತೇಶ್ವರಿಮೇಳದ ವ್ಯವಸ್ಥಾಪಕ ಸುರೇಶ್ ಬಂಗೇರ, ನ್ಯಾಯವಾದಿ ಟಿ ಮಂಜುನಾಥ ಗಿಳಿಯಾರು, ಪಂಚವರ್ಣದ ಸಂಘಟನಾಕಾರ್ಯದರ್ಶಿ ಗಿರೀಶ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ಕೋಟ ಚಂದ್ರ ಆಚಾರ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here