ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೊಡ್ಲಾಡಿ ಗ್ರಾಮದ ಶಂಕರ ನಾಯ್ಕ ಬಿ. ಇವರು ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾನಿಲಯದ ಸಹಪ್ರಾ ಧ್ಯಾಪಕರಾದ ಡಾ. ಬಾಲಾಜಿ ಭೋವಿ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ”lmpact of International Financial Reporting Standards on Manufacturing Companies in India” ಮಹಾಪ್ರಬಂಧಕ್ಕೆ ತಮಿಳುನಾಡಿನ ಭಾರತೀಯಾರ್ ವಿಶ್ವವಿದ್ಯಾನಿಲಯ ಪಿಹೆಚ್.ಡಿ(PHD) ಪದವಿಯನ್ನು ನೀಡಿ ಗೌರವಿಸಿದೆ.
ಪ್ರಸ್ತುತ ಇವರು ಕೋಟ-ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕೊಡ್ಲಾಡಿ ಗ್ರಾಮದ ಸೂರ ನಾಯ್ಕ ಮತ್ತು ಮುಕಾಂಬಿಕಾ ದಂಪತಿಗಳ ಪುತ್ರರಾಗಿರುತ್ತಾರೆ.











