ಕುಂದಾಪುರ :ಪರಿಸರ ಪ್ರೇಮಿ, ಸ್ತ್ರೀ ರೋಗ ತಜ್ಞ ಡಾ. ಹೆಚ್.ಎಸ್.ಮಲ್ಲಿ ನಿಧನ

0
1327

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರದ ಪ್ರಸಿದ್ಧ ವೈದ್ಯ, ಪರಿಸರ ಪ್ರೇಮಿ, ಪಕ್ಷಿ ತಜ್ಞ, ಯೆಡ್ತೆರೆ ನರ್ಸಿಂಗ್ ಹೋಂ ಮಾಲೀಕ, ರೊಟೇರಿಯನ್ ಡಾ. ಹೆಚ್. ಶುಭೋದ್ ಕುಮಾರ್ (ಹೆಚ್.ಎಸ್.ಮಲ್ಲಿ) ಮಲ್ಲಿ ವಯೋಸಹಜವಾಗಿ ಸೋಮವಾರ ರಾತ್ರಿ ನಿಧನರಾದರು.

Click Here

ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಡಾ. ಮಲ್ಲಿ, ಪರಿಸರ ಪ್ರೇಮಿಯಾಗಿದ್ದವರು. ಪಕ್ಷಿ ಸಂಕುಲ, ಪ್ರಕೃತಿ ನಿಸರ್ಗ ಸಾಮಾಜಿಕ ಸ್ವಾಸ್ತ್ಯದ ಕುರಿತು ಅಪಾರ ಕಾಳಜಿ ಹಾಗೂ ಕಳಕಳಿ ಹೊಂದಿದ್ದ ಅವರು, ಸಾಕಷ್ಟು ಅಧ್ಯಯನ ನಡೆಸಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಸ್ತ್ರೀ ರೋಗ ತಜ್ಞರಾಗಿಯೂ ಸೇವೆ ಸಲ್ಲಿಸಿದ್ದ ಡಾ. ಮಲ್ಲಿ, ರೋಟರಿ ಕ್ಲಬ್ ಸದಸ್ಯರಾಗಿವಿವಿಧ ಹುದ್ದೆಗಳನ್ನು ಅಲಂಕರಿಸಿ ಸಾಮಾಜಿಕ ಸೇವೆ ಮಾಡಿದ್ದಾರೆ. ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಉಚಿತವಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಪತ್ನಿ, ಇಬ್ಬರು ವಿವಾಹಿತ ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಅವರ ‘ಮನೋರಮಾ’ ಮನೆಯಲ್ಲಿ ವೀಕ್ಷಿಸಿಲು ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Click Here

LEAVE A REPLY

Please enter your comment!
Please enter your name here