ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ನಮ್ಮ ನಾಡ ಒಕ್ಕೂಟ (ರಿ)ಹೆಬ್ರಿ ಘಟಕದ ವತಿಯಿಂದ 2023-24ನೇ ಯ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿನಿ ಹಾಗೂ ಹೆಬ್ರಿ ಮಠದ ಬೆಟ್ಟು ನಿವಾಸಿ ಅನ್ವರ್ ರಪೀ ಹಾಗೂ ಆಯಿಶಾ ಬಾನುರವರ ಪುತ್ರಿ ಶಿಫಾವ್ರವರಿಗೆ ಅಭಿನಂದನೆ ಕಾರ್ಯಕ್ರಮ ಹೆಬ್ರಿ ಅನ್ವರ್ ರಫಿಯವರ ಮನೆಯಲ್ಲಿ ಇತ್ತೀಚೆಗೆ ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಪ್ರದಾನ ಕಾರ್ಯದರ್ಶಿ ಅಬ್ದುಲ್ ಶುಕುರ್ ಬೆಳ್ವೆ ಯವರ ನೇತೃತ್ವದಲ್ಲಿ ನಡೆಯಿತು. 625 ರಲ್ಲಿ 612ಅಂಕ ( ಶೇ.97.92% ) ಪಡೆದು ವಿಶೇಷ ಸಾಧನೆ ಮಾಡಿ, ಹೆಬ್ರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಿಂದಿ ಮತ್ತು ಸಮಾಜ ವಿಜ್ಞಾನದಲ್ಲಿ ೧೦೦ ಅಂಕ ಪಡೆದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹೆಬ್ರಿ ಘಟಕದ ಕೋಶಾಧಿಕಾರಿ ಅಬ್ದುಲ್ ಅಝೀಝ್ ಮುನೀಯಲ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅರಾಫತ್ ಅಲ್ಬಾಡಿ, ಜಿಲ್ಲಾ ಸಮಿತಿ ಸದಸ್ಯ ಮೊಹಮ್ಮದ್ ರಯನ್ ಹೆಬ್ರಿ ಘಟಕದ ಸದಸ್ಯ ಜಿಫ್ರಿ ಸಾಹೇಬ್ ಬೆಳ್ವೆ, ಸ್ಥಳೀಯರಾದ ಮುಸ್ತಾಫಾ , ಹಸನಬ್ಬ ಮೊದಲಾದವರು ಉಪಸ್ಥಿರಿದ್ದರು .ರಯನ್ ಕಿರಾತ ಪಠಿಸಿದರು, ಫಾರಿಸ್ ಸ್ವಾಗತಿಸಿದರು, ಜಾಸಿಮ್ ವಂದಿಸಿದರು ಅರಾಫತ್ ಕಾರ್ಯಕ್ರಮ ನಿರೂಪಿಸಿದರು.











