ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬ್ರಹ್ಮಾವರ ತಾಲೂಕು ಶಿರೂರು ಹೆಮ್ಮಣಿಕೆ ಕೃಷ್ಣ ನಾಯ್ಕ ಅವರ ತೆರೆದ ಬಾವಿಗೆ ಜೂ.14ರಂದು ಅಪರೂಪದ ಕಪ್ಪು ಚಿರತೆ ಬಿದ್ದಿದ್ದು ಶನಿವಾರ ಬಾವಿಯಲ್ಲಿ ಚಿರತೆ ಇರುವುದು ಗೊತ್ತಾಯಿತು. ಪಕ್ಕದ ರಬ್ಬರ್ ಪ್ಲಾಂಟೇಶನ್ ಮಾಲಕರಾದ ಶೇಖರ ಶೆಟ್ಟಿಯವರ ಗಮನ ತಂದಾಗ ಶೇಖರ ಶೆಟ್ಟಿವರು ಸ್ಥಳೀಯ ವಂಡಾರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ಥಳೀಯರು ಕಾರ್ಯಾಚರಣೆ ನಡೆಸಿ ಕಪ್ಪು ಚಿರತೆಯನ್ನು ಸುರಕ್ಷಿತವಾಗಿ ಮೇಲೆ ತರಲಾಯಿತು. ಬಾವಿಯಿಂದ ಮೇಲೆ ಬಂದ ಕಪ್ಪು ಚಿರತೆ ರಬ್ಬರ್ ತೋಟದೊಳಗೆ ಓಡಿ ಮರೆಯಾಯಿತು.










