ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಪದ ಪ್ರಧಾನ ಸಮಾರಂಭವು ಗುರುವಾರ ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಭವನದ ಎಸ್.ಎಸ್ ಹೆಗ್ದೆ ಸಭಾಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ 2024 – 25 ರ ರೋಟರಿ ವರ್ಷದ ಸಾಲಿಗೆ ರೋಟರಿಯನ್ ಜೂಡಿತ್ ಮೆಂಡೋನ್ಸಾ ಪದವಿ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ ಕುಮಾರಿ ಸ್ವೀಝುಲ್ ಶುಭ ಹಾರೈಸಿದರು. ಪದಗ್ರಹಣ ಅಧಿಕಾರಿಯಾಗಿ PD G ಅಭಿನಂದನ್ ಶೆಟ್ಟಿ ಅವರು ಕ್ಲಬ್ಬಿನ ನೂತನ ಅಧ್ಯಕ್ಷ ಹಾಗೂ ಪದಾದಿಕಾರಿಗಳನ್ನು ಪದಗ್ರಹಿಸಿದರು. ಇದೇ ಸಂದರ್ಭ ನಾಲ್ಕು ಜನ ಹೊಸ ಸದಸ್ಯರ ಸೇರ್ಪಡೆಯಾಯಿತು. ಹಿಂದಿನ ಸಾಲಿನ ಅಧ್ಯಕ್ಷರಾದ ರೊ. ಸುರೇಶ್ ಮಲ್ಯ ಸ್ವಾಗತಿಸಿ, ಹೊಸ ಕಾರ್ಯದರ್ಶಿ ರೊ. ಭರತ್ ಶೆಟ್ಟಿ ವಂದಿಸಿದರು. ರೊ.ಸುರೇಖಾ ಪುರಾಣಿಕ್ ನಿರೂಪಿಸಿದರು.











