ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬಸ್ರೂರು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ನಕ್ಷ ಎಸ್. ಎಸ್. ಎಲ್. ಸಿ. ಪೂರಕ ಪರೀಕ್ಷೆ -2 ರಲ್ಲಿ 616 ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ ಒಂಬತ್ತನೇ ರ್ಯಾಂಕ್ ಪಡೆದಿರುತ್ತಾಳೆ.
ಸಾಂತಾವರದ ಎಸ್. ಸುರೇಶ್ ಹಾಗೂ ಸರೋಜ ದಂಪತಿಗಳ ಪುತ್ರಿಯಾಗಿದ್ದು ಈ ಹಿಂದೆ ಎಸ್. ಎಸ್.ಎಲ್. ಸಿ.ಪರೀಕ್ಷೆಯಲ್ಲಿ 605 ಅಂಕಗಳನ್ನು ಪಡೆದಿದ್ದು ಪೂರಕ ಪರೀಕ್ಷೆ ಯಲ್ಲಿ 11 ಹೆಚ್ಚುವರಿ ಅಂಕಗಳನ್ನು ಪಡೆದಿರುತ್ತಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.











