ಕುಂದಾಪುರ ಮಿರರ್ ಸುದ್ದಿ…

ಕೋಟ: ಪರಿಸರ ಕಾಳಜಿ ಹಾಗೂ ಅದನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವುದೇ ಶ್ಲಾಘನೀಯ ಕಾರ್ಯ ಎಂದು ಪರಿಸರಪ್ರೇಮಿ, ನಿರೂಪಕ ಅವಿನಾಶ್ ಕಾಮತ್ ಹೇಳಿದರು.
ಪಾಂಪಳ್ಳಿ ಡಾ.ಬಾಲಕೃಷ್ಣ ನಕ್ಷತ್ರಿ ಮನೆಯ ವಠಾರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಸಮುದ್ಯತಾ ಗ್ರೂಪ್ಸ್ ಕೋಟ, ಸಿನಿಯರ್ ಜೆಸಿಐ ಕೋಟ ಇವರುಗಳ ಸಹಯೋಗದೊಂದಿಗೆ 216ನೇ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಕ್ಕೆ ಚಾಲನೆ ನೀಡಿ ಮಾತನಾಡಿ ಪಂಚವರ್ಣದಂತೆ ಪ್ರತಿ ಗ್ರಾಮದಲ್ಲಿ ಸಾಕಷ್ಟು ಸಂಘಸಂಸ್ಥೆಗಳು ಹುಟ್ಟಿಕೊಂಡರೆ ಆ ಪರಿಸರ ಹಚ್ಚ ಹಸಿರಾಗುವುದರಲ್ಲಿ ಅನುಮಾನವೇ ಇಲ್ಲ, ಸಾಮಾಜಿಕ ಪ್ರಜ್ಞೆ ಎಂಬುದು ಪ್ರತಿಯೊಬ್ಬರಲ್ಲೂ ಬೆಳೆಯಬೇಕು,ಪ್ರಕೃತಿಯನ್ನು ಪ್ರೀತಿಸುವ ಬೆಳೆಸುವ ಮನಸ್ಥಿತಿ ಸೃಷ್ಠಿಯಾದರೆ ಶುಚಿ ಶುದ್ಧ ಪರಿಸರ ನಮ್ಮದಾಗುತ್ತದೆ. ಜಿಲ್ಲಾಧ್ಯಂತ ಈ ಬಗ್ಗೆ ಕಾರ್ಯೋನ್ಮುಖವಾಗಿದ್ದೇವೆ ಎಂದರು.
ಉಪನ್ಯಾಸಕ ಸಂಜೀವ ಗುಂಡ್ಮಿ ಮಾತನಾಡಿ ಪ್ರಕೃತಿಯ ಮೇಲೆ ನಿರಂತ ಅತ್ಯಾಚಾರ ನಡೆಯುತ್ತಿದೆ ಮನುಕುಲ ಪರಿಸರದ ಬಗ್ಗೆ ಯಾವುದೇ ರೀತಿ ಕಾಳಜಿ ವಹಿಸುತ್ತಿಲ್ಲ. ಈ ಕಾರಣದಿಂದಲೆ ಪ್ರಸ್ತುತ ಪ್ರಾಕೃತಿಕ ಸಮಸ್ಯೆಗಳನ್ನು ಎದುರಿಸುವಂತ್ತಾಗಿದೆ ಎಂದು ಪಂಚವರ್ಣ ಸಂಸ್ಥೆಯಂತೆ ಒಂದಿಷ್ಟು ಸಂಘಸಂಸ್ಥೆಗಳು ಹುಟ್ಟಿಕೊಳ್ಳಲಿ ಆ ಮೂಲಕ ಪ್ರಕೃತಿ ಪ್ರೇಮ ರಾರಾಜಿಸಲಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ,ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ,ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ಜಿ.ರಾಮಚಂದ್ರ ಐತಾಳ್,ಉಪನ್ಯಾಸಕ ಡಾ.ಬಾಲಕೃಷ್ಣ ನಕ್ಷತ್ರಿ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮೂಡುಗಿಳಿಯಾರು ಇದರ ಪೂರ್ವಾಧ್ಯಕ್ಷ ಶರಣಯ್ಯ ಹಿರೇಮಠ,ಪಾಂಚಜನ್ಯ ಸಂಘ ಹಂದಟ್ಟು ಪಾರಂಪಳ್ಳಿ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಎಂ ಬಾಯರಿ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು.











