ಬೀಜಾಡಿ :ವಿಜ್ಞಾನ ಪರಿಕರ ಮತ್ತು ನೋಟ್ ಪುಸ್ತಕ ವಿತರಣೆ

0
210

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀಜಾಡಿ ಮೂಡು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪರಿಕರ ಮತ್ತು ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.

ದಿ. ಸರಸ್ವತಮ್ಮ ಮತ್ತು ದಿ. ಕೆ.ನಾರಾಯಣ ತವಳರು, ದಿ. ಶೇಷಮ್ಮ ಮತ್ತು ದಿ. ಕೆ.ರಾಮಣ್ಣ ತವಳರ ಪುತ್ರ ಪುರುಷೋತ್ತಮ ತವಳರು ನೀಡಿದ ರೂ. ಐವತ್ತೊಂದು ಸಾವಿರ (51,000) ಮೌಲ್ಯದ ವಿಜ್ಞಾನ ಉಪಕರಣಗಳನ್ನು ಸಹೋದರಿಯಾದ ಶ್ಯಾಮಲಾ ವರ್ಣರು ಹಸ್ತಾಂತರಿಸಿದರು.

Click Here

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಯಾದ ಅನಿಲ್ ಉಪಾಧ್ಯಾಯ ಮತ್ತು ಅಂಬಿಕಾ ಅನಿಲ್ ಉಪಾಧ್ಯಾಯ ಗೌರವ ಶಿಕ್ಷಕಿಗೆ ಒಂದು ವರ್ಷದ ಗೌರವ ಸಂಭಾವನೆಯ ಮೊತ್ತವನ್ನು ನೀಡಿದರು. ಹೆಲ್ಪಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ಇವರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವಾದಿರಾಜ ಹೆಬ್ಬಾರ್, ಗುಲಾಬಿಯಮ್ಮ, ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷ ಪ್ರದೀಪ ಮೊಗವೀರ, ಕೋಶಾಧಿಕಾರಿ ಸುನಿಲ್ ಖಾರ್ವಿ ತಲ್ಲೂರು ಹಾಗೂ ಟ್ರಸ್ಟ್‍ನ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಅಮೀನ್, ಗಣೇಶ್ ಕಾಂಚನ್, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಪ್ರವೀಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಜುಳಾ ಸಹ ಶಿಕ್ಷಕಿ (ವಿಜ್ಞಾನ) ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗೌರವ ಶಿಕ್ಷಕಿಯರು ಸಹಕರಿಸಿದರು.

Click Here

LEAVE A REPLY

Please enter your comment!
Please enter your name here