ಗುಂಡ್ಮಿ : ‘ಇವ ನಮ್ಮವ’ ಎಂಬ ವಿನೂತನ ರಂಗಸಂವಾದ ಕಾರ್ಯಕ್ರಮ

0
382

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ರಸರಂಗ ಕೋಟ, ಸಮಸ್ತರು ರಂಗಸಂಶೋಧನಾ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ‘ಇವ ನಮ್ಮವ’ ಎಂಬ ವಿನೂತನ ರಂಗಸಂವಾದ ಕಾರ್ಯಕ್ರಮ ಗುಂಡ್ಮಿಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪ ಇಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ರಂಗಕರ್ಮಿ,ಸಾಹಿತಿ,ಸಂಘಟಕ ಪೆÇ್ರ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಮಾತನಾಡಿ ಸಾಂಸ್ಕ್ರತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಷ್ಟು ಸುಲಭದ ಮಾತಲ್ಲ ಬದಲಾಗಿ ಪ್ರಯತ್ನಶೀಲತೆ ಇದ್ದರೆ ಯಶಸ್ಸು ತಾನಾಗಿಯೇ ಲಭಿಸುತ್ತದೆ. ಈ ಹಿಂದೆ ನಾನು ಕೂಡಾ ಅದನ್ನು ಸಂಘಟಿಸಿಕೊಳ್ಳುವ ಉದ್ದೇಶದಿಂದ ಕಿ.ಶ. 1965 ರಲ್ಲಿ ಮಿತ್ರಮಂಡಳಿ ಕೋಟ ಇದರ ಗೆಳೆಯ ಸದಸ್ಯರ ಸಂಸರ್ಗದಿಂದ ಹಾಗೂ ಪ್ರಾಮಾಣಿಕ ತೊಡಗುವಿಕೆಯಿಂದ ಇಂದು ನಾನು ಇಷ್ಟೆಲ್ಲಾ ಸಾಧನೆಯನ್ನು ಮಾಡಲು ಸಾಧ್ಯವಾಯಿತು. ಮಿತ್ರ ದಿ.ಭಾಸ್ಕರ ಮಯ್ಯ ಇವರ ಸಹಚರ್ಯೆಯಲ್ಲಿ ನಾನು ಓದುವುದನ್ನು ಕಲಿತೆ. ಆ ಓದು ನನ್ನ ಚಿಂತನೆಯನ್ನು ಬೆಳೆಸಿತು. ಅದೇ ನನ್ನೆಲ್ಲಾ ಸಾಹಿತ್ಯಿಕ ಚಟುವಟಿಕೆಗಳಿಗೆ ಅಡಿಪಾಯ ಹಾಕಿತು ಎಂದರು.

ಅವರೊಂದಿಗೆ ಸಂವಾದಕ ಮಿತ್ರರಾಗಿ ನೀಲಾವರ ಸುರೇಂದ್ರ ಅಡಿಗ,ನರಸಿಂಹ ಅಡಿಗ,ಶ್ರೀಪತಿ ಹೇರಳೆ,ರಾಜಾರಾಮ ಐತಾಳ್,ಮಂಜುನಾಥ ಉಪಾಧ್ಯ,ರಾಮಚಂದ್ರ ಐತಾಳ್,ಬೆಳಗೋಡು ರಮೇಶ್ ಭಟ್,ಸುಮನ ಹೇರಳೆ ಇವರು ಸಹಕರಿಸಿದರು.

Click Here

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಸರಂಗದ ಅಧ್ಯಕ್ಷೆ ಸುಧಾ ಮಣೂರು ವಹಿಸಿದ್ದರು. ಅಭ್ಯಾಗತರಾಗಿ ಪ್ರಸಿದ್ಧ ನಟ,ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಉಪಸ್ಥಿತರಿದ್ದರು.

ಪುನೀತ್ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here