ಕುಂದಾಪುರ ಮಿರರ್ ಸುದ್ದಿ…
ಕೋಟ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ “ಜಪಾನ್ ಕರಾಟೆ ಶೋಟೋಕನ್ ಅಕಾಡೆಮಿ” ಇವರು ನಡೆಸಿದ “ನ್ಯಾಷನಲ್ ಕರಾಟೆ ಚಾಂಪಿಯನ್” ಸ್ಪರ್ಧೆಯಲ್ಲಿ ಮೂಡುಗಿಳಿಯಾರು ಹಾಗೂ ಪಡುಕೆರೆಯ ಕರಾಟೆ ಯುವಪ್ರತಿಭೆಗಳು ಒಟ್ಟು 20 ಚಿನ್ನ 14 ಬೆಳ್ಳಿ 12 ಕಂಚಿನ ಪದಕ ಪಡೆದು “ಚಾಂಪಿಯನ್” ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ
ಈ ಹಿನ್ನಲ್ಲೆಯಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ನ.1 ರಂದು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಮೂಡುಗಿಳಿಯಾರು ಶಾಲೆಯಲ್ಲಿ ಕೋಟ ಪೆÇಲೀಸ್ ಠಾಣೆಯ ಠಾಣಾಧಿಕಾರಿ ಸಂತೋಷ್ ಬಿಪಿ ಇವರ ಇವರ ನೇತೃತ್ವದಲ್ಲಿ ಪ್ರಶಸ್ತಿಯನ್ನು ಹಸ್ತಾಂತರ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶಣೈ , ಮಾಜಿ.ತಾ.ಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ, ಕೋಟ ಗ್ರಾಮಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶೆಖರ್ ಜಿ ಗರಡಿಮಕ್ಕಿ ,ಪಂಚಾಯತ್ ಸದಸ್ಯ ಯೋಗೇಂದ್ರ ಪೂಜಾರಿ, ,ಸ್ಥಳೀಯರಾದ ಶಿವರಾಮ ಶೆಟ್ಟಿ ಬಡಾಮನೆ , ಶಿವರಾಮ ಭಟ್, ವಸಂತ ಗಿಳಿಯಾರು, ಸುಬ್ರಹ್ಮಣ್ಯ ಹೇರ್ಳೆ ಗಿಳಿಯಾರು, ಶಾಲಾ ಶಿಕ್ಷಕವೃಂದ ಉಪಸ್ಥಿತರಿದ್ದರು.











